ADVERTISEMENT

ನಡಿಗೆ ಸ್ಪರ್ಧೆಗೆ ಭಾರತದ ಅಥ್ಲೀಟ್‌ಗಳು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಭಾರತದ ಅಥ್ಲೀಟ್‌ಗಳು ಮಾರ್ಚ್‌್ 16ರಿಂದ ಜಪಾನ್‌ನ ನೋಮಿಯಲ್ಲಿ ನಡೆಯಲಿ ರುವ 20 ಕಿ.ಮೀ. ನಡಿಗೆ ಸ್ಪರ್ಧೆಯ ಏಷ್ಯನ್‌  ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಪುರುಷರ ವಿಭಾಗದಲ್ಲಿ ಗುರ್ಮಿತ್‌ ಸಿಂಗ್‌, ಕೆ.ಟಿ. ಇರ್ಫಾನ್‌, ಕೆ. ಗಣಪತಿ, ದೇವೇಂದರ್‌ ಮತ್ತು ಬಸಂತ್‌ ಬಹ ದೂರ್‌ ರಾಣಾ ಅವರು ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ. ಮಹಿಳಾ ವಿಭಾಗದಲ್ಲಿ ಕೌಸ್ಬೀರ್‌ ಕೌರ್‌ ಪಾಲ್ಗೊಳ್ಳಲಿದ್ದಾರೆ.

ಹೋದ ತಿಂಗಳು ಕೊಚ್ಚಿಯಲ್ಲಿ ನಡೆದ 20 ಕಿ.ಮೀ. ನಡಿಗೆಯ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಈ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ತೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.