ADVERTISEMENT

ನಿದಾಸ್‌ ಕಪ್‌ ಕ್ರಿಕೆಟ್‌: ಜಯದ ವಿಶ್ವಾಸದಲ್ಲಿ ಬಾಂಗ್ಲಾದೇಶ

ಪಿಟಿಐ
Published 15 ಮಾರ್ಚ್ 2018, 21:00 IST
Last Updated 15 ಮಾರ್ಚ್ 2018, 21:00 IST
ನಿದಾಸ್‌ ಕಪ್‌ ಕ್ರಿಕೆಟ್‌: ಜಯದ ವಿಶ್ವಾಸದಲ್ಲಿ ಬಾಂಗ್ಲಾದೇಶ
ನಿದಾಸ್‌ ಕಪ್‌ ಕ್ರಿಕೆಟ್‌: ಜಯದ ವಿಶ್ವಾಸದಲ್ಲಿ ಬಾಂಗ್ಲಾದೇಶ   

ಕೊಲಂಬೊ (ಪಿಟಿಐ): ಈಗಾಗಲೇ ಶ್ರೀಲಂಕಾ ತಂಡಕ್ಕೆ ಸೋಲುಣಿಸಿರುವ ಬಾಂಗ್ಲಾದೇಶ ತಂಡ ನಿದಾಸ್‌ ಕಪ್‌ ಟ್ವೆಂಟಿ–20 ತ್ರಿಕೋನ ಸರಣಿಯಲ್ಲಿ ಫೈನಲ್‌ ತಲುಪುವ ವಿಶ್ವಾಸದಲ್ಲಿದೆ.

ಎರಡೂ ತಂಡಗಳು ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.  ಆ ಪಂದ್ಯದಲ್ಲಿ ಮಹಮ್ಮದುಲ್ಲಾ ನಾಯಕತ್ವದ ಪಡೆಯು ರೋಚಕ ಜಯ ದಾಖಲಿಸಿತ್ತು.

ಪಾಯಿಂಟ್ಸ್‌ ಪಟ್ಟಿಯಲ್ಲಿ ಆರು ಅಂಕಗಳನ್ನು ಗಳಿಸಿರುವ ಭಾರತ ತಂಡವು ಮೊದಲ ಸ್ಥಾನದಲ್ಲಿದೆ. ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡ ಗಳು ಎರಡು ಪಾಯಿಂಟ್ಸ್‌ ಪಡೆದು ನಂತರದ ಸ್ಥಾನದಲ್ಲಿವೆ. ಎರಡೂ ತಂಡ ಗಳು ಆಡಿದ ಒಂದು ಪಂದ್ಯ ಗೆದ್ದಿದ್ದರೆ, ಎರಡು ಪಂದ್ಯ ಸೋತಿವೆ. ಆದ್ದರಿಂದ ಈ ಪಂದ್ಯ ಗೆದ್ದ ತಂಡ ಮಾರ್ಚ್‌ 18ರಂದು ನಡೆಯುವ ಫೈನಲ್‌ನಲ್ಲಿ ಭಾರತದ ಎದುರು ಆಡಲಿದೆ.

ADVERTISEMENT

ಶಕೀಬ್‌ಗೆ ಸ್ಥಾನ: ಶುಕ್ರವಾರದ ಪಂದ್ಯದಲ್ಲಿ ಶಕೀಬ್ ಅಲ್‌ ಹಸನ್‌ಗೆ ಬಾಂಗ್ಲಾ ತಂಡದಲ್ಲಿ ಸ್ಥಾನ ಸಿಕ್ಕಿದೆ. ಆಡುವ ಹನ್ನೊಂದರ ಬಳಗದಲ್ಲಿಯೂ ಅವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಆಲ್‌ರೌಂಡ್ ಆಟಗಾರ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅವರು ತಂಡಕ್ಕೆ ಮರಳಿದರೆ ಬಾಂಗ್ಲಾ ತಂಡದ ಬಲ ಹೆಚ್ಚುವುದು ಖಚಿತ.

ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ದಾಖಲಿಸಿದ್ದ 215 ರನ್‌ಗಳ ಗುರಿಯನ್ನು ಮುಟ್ಟುವಲ್ಲಿ ಬಾಂಗ್ಲಾ ತಂಡವು ಸಫಲವಾಗಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳ ಸಂಘಟಿತ ಆಟದಿಂದ ಈ ಗೆಲುವು ಸಾಧ್ಯವಾಗಿತ್ತು. ರನ್ ಹೊಳೆ ಹರಿಸಿದ್ದ ತಮೀಮ್‌ ಇಕ್ಬಾಲ್‌ (47) ಹಾಗೂ ಮುಷ್ಫೀಕರ್ ರಹೀಮ್‌ (72) ಅವರು ಭರವಸೆಯ ಆಟಗಾರರಾಗಿದ್ದಾರೆ. ಮಧ್ಯಮವೇಗದ ಬೌಲರ್‌ ಮುಸ್ತಫಿಜರ್ ರೆಹಮಾನ್‌ ಈ ಟೂರ್ನಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ರುಬೆಲ್‌ ಹೊಸೇನ್‌ ಕೂಡ ಉತ್ತಮ ಲಯದಲ್ಲಿದ್ದಾರೆ.

ಶ್ರೀಲಂಕಾಕ್ಕೆ ಸವಾಲು: ಮೊದಲ ಪಂದ್ಯದಲ್ಲಿಯೇ ಭಾರತಕ್ಕೆ ಆಘಾತ ನೀಡಿದ್ದ ಶ್ರೀಲಂಕಾ ತಂಡವು  ನಂತರ ಪಂದ್ಯಗಳಲ್ಲಿ ಆಘಾತ ಅನುಭವಿಸಿತ್ತು. ಆರಂಭಿಕರಾದ ಧನುಷ್ಕಾ ಗುಣತಿಲಕ ,ಕುಶಾಲ್ ಮೆಂಡಿಸ್‌, ಕುಶಾಲ್ ಪೆರೇರ  ಬ್ಯಾಟಿಂಗ್ ವಿಭಾಗದ
ಪ್ರಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.