ADVERTISEMENT

ನಿಧನ ವಾರ್ತೆ: ಗುಲಾಂ ಹುಸೇನ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 19:30 IST
Last Updated 14 ಏಪ್ರಿಲ್ 2012, 19:30 IST
ನಿಧನ ವಾರ್ತೆ:  ಗುಲಾಂ ಹುಸೇನ್
ನಿಧನ ವಾರ್ತೆ: ಗುಲಾಂ ಹುಸೇನ್   

ಮೈಸೂರು: ಇಲ್ಲಿಯ ಮೈಸೂರ್ ಮುಸ್ಲಿಂ ಫುಟ್‌ಬಾಲ್ ಕ್ಲಬ್ ಮಾಜಿ ನಾಯಕ ಗುಲಾಂ ಹುಸೇನ್ ಶನಿವಾರ ಸಂಜೆ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಅವರ ನಾಯಕತ್ವದಲ್ಲಿ ಮೈಸೂರು ರೋವರ್ಸ್‌ ಕ್ಲಬ್ ತಂಡವು ಎರಡು ಬಾರಿ ಪಾಕಿಸ್ತಾನದಲ್ಲಿ ಟೂರ್ನಿ ಆಡಲು ತೆರಳಿತ್ತು. ನಂತರ ಅವರು ಮೈಸೂರ್ ಮುಸ್ಲಿಂ ಕ್ಲಬ್‌ಗೆ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ಕೇರಳದಲ್ಲಿ ನಡೆದ ಉನ್ನಿ ಸ್ಮಾರಕ ಅಖಿಲ ಭಾರತ ಟೂರ್ನಿಯ ಫೈನಲ್‌ನಲ್ಲಿ ಮೈಸೂರು ತಂಡದ ಪರವಾಗಿ ಕೆಎಸ್‌ಆರ್‌ಟಿಸಿ ಟ್ರಿವೆಂಡ್ರಮ್ ತಂಡದ ಎದುರು ಏಕೈಕ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ಅವರ ತಂದೆ ಮುಸ್ತಫಾ ಹುಸೇನ್ ಅವರು ಕೊಲ್ಕತ್ತದ ಮಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ ತಂಡಕ್ಕೆ ಆಡಿದ್ದರು. ಅಲ್ಲದೇ ತಂಡವು ಬಿ. ಡಿವಿಷನ್‌ನಿಂದ ಎ ಡಿವಿಷನ್‌ಗೆ ಮುನ್ನಡೆ ಸಾಧಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮುಸ್ತಫಾ ಅವರು 1955ರಲ್ಲಿ ನಿಧನರಾಗಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.