
ಪ್ರಜಾವಾಣಿ ವಾರ್ತೆರಾಂಚಿ (ಪಿಟಿಐ): ಬಿಲ್ಲುಗಾರಿಕೆಯಲ್ಲಿ ಅಂತರರಾಷ್ಟ್ರೀಯ ಸಾಧನೆ ಮಾಡಿರುವ ನಿಶಾರಾಣಿ ದತ್ತಾ ಅವರು ಈಚೆಗೆ ತೀವ್ರ ಹಣಕಾಸಿನ ಮುಗ್ಗಟ್ಟಿನಿಂದಾಗಿ ಬಿಲ್ಲುಗಾರಿಕೆಯಲ್ಲಿ ಬಳಸುವ ತಮ್ಮ ಸಲಕರಣೆಗಳನ್ನೇ ಮಾರಿದ್ದ ಘಟನೆ ಸುದ್ದಿಯಾಗುತ್ತಿದ್ದಂತೆಯೇ ತಕ್ಷಣ ಅದಕ್ಕೆ ಸ್ಪಂದಿಸಿರುವ ಜಾರ್ಖಂಡ್ ಉಪ ಮುಖ್ಯಮಂತ್ರಿ ಸುದೇಶ್ ಮೊಹ್ತಾ 25 ಸಾವಿರ ರೂಪಾಯಿ ನೆರವು ನೀಡಿದ್ದಾರೆ.
ತಾವೇ ರಚಿಸಿರುವ ಸಾಂಸ್ಕೃತಿಕ ಸಂಘ `ಗುಂಜ್~ ಪರವಾಗಿ ಮೊಹ್ತಾ ಈ ನೆರವು ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ, ನಿಶಾ ಅವರ ವಿದ್ಯಾಭ್ಯಾಸಕ್ಕೂ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ನಿಶಾ ಬ್ಯಾಂಕಾಕ್ ಗ್ರ್ಯಾನ್ ಪ್ರಿ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.