ಮೈಸೂರು: ನೀಲಗಿರಿ ಬೆಟ್ಟಶ್ರೇಣಿಗಳಲ್ಲಿ ನಡೆದ ‘ದ ಟೂರ್ ಆಫ್ ನೀಲಗಿರಿಸ್’ನಲ್ಲಿ ಡೆನ್ಮಾರ್ಕಿನ ನೀಲ್ಸ್ ಈಗಿಲ್ ಬ್ರಾಡ್‌ಬರ್ಗ್ ಮತ್ತು ಬೆಂಗಳೂರಿನ ವಿಕಿ ನಿಕೋಲ್ಸನ್ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗಗಳ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು. ಡಿಸೆಂಬರ್ 16ರಂದು ಬೆಂಗಳೂ ರಿನಿಂದ ಆರಂಭವಾಗಿದ್ದ ಟೂರ್ ಆಫ್ ನೀಲಗಿರಿಸ್ ಸೋಮವಾರ ಸಂಜೆ ಮರಳಿ ಮೈಸೂರಿಗೆ ಬಂದು ಮುಕ್ತಾಯವಾಯಿತು.
ಮುಕ್ತಾಯದ ಕೊನೆಯ 8.5 ಕಿ.ಮೀ ವಿಭಾಗದಲ್ಲಿ ಏರ್ಪಡಿಸಲಾದ ವೈಯಕ್ತಿಕ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ನೀಲ್ಸ್ ಈಗಿಲ್ ಬ್ರಾಡ್‌ಬರ್ಗ್ (ಕಾಲ: 1ಗಂ,57ನಿ, 53,9ಸೆ) ಮೊದಲಿಗರಾಗಿ ಗುರಿ ತಲುಪಿದರು. ಆರೂವರೆ ನಿಮಿಷದ ಅಂತರದಲ್ಲಿ ಇಂಗ್ಲೆಂಡ್‌ನ ಮಾರ್ಕ್ ಬ್ರೂಸ್, ಕ್ರಿಸ್ಟಿಯನ್ ಗ್ರಾವರ್ ಬ್ರೂಸ್ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದರು.
ಮೂಲತಃ ಐರ್ಲೆಂಡ್‌ನವರಾದ ಬೆಂಗಳೂರಿನ ನಿವಾಸಿ, 48 ವರ್ಷದ ವಿಕಿ ನಿಕೋಲ್ಸನ್ ಮಹಿಳೆಯರ ವಿಭಾಗದಲ್ಲಿ ಪ್ರಥಮರಾದರು. ಟೀಮ್ ಟೈಮ್ ಟ್ರಯಲ್ಸ್‌ನಲ್ಲಿ ಇಂಗ್ಲೆಂಡ್ ತಂಡವು ಪ್ರಶಸ್ತಿ ಗಳಿಸಿತು.
ಫಲಿತಾಂಶಗಳು: ಸಮಗ್ರ ಪ್ರಶಸ್ತಿ: ಪುರುಷರು (ಕೊನೆಯ 8.5 ಕಿ.ಮೀ ಸ್ಪರ್ಧೆ): ನೀಲ್ಸ್ ಈಗಿಲ್ ಬ್ರಾಡ್‌ಬರ್ಗ್ (ಡೆನ್ಮಾರ್ಕ್)–1, ಮಾರ್ಕ್ ಬ್ರೂಸ್ –2, ಕ್ರಿಸ್ಟಿಯನ್ ಗ್ರಾವರ್ ಲಾರ್ಸನ್–3, ಹ್ಯಾರಿ–4, ಅಲೋಫ್–5, ನಿಸಾರ್ ಅಹ್ಮದ್–6, ಕಾಲ: 1ಗಂ,57ನಿ, 53,9ಸೆ;
ಮಹಿಳೆಯರು: ವಿಕಿ ನಿಕೋಲ್ಸನ್ (ಬೆಂಗಳೂರು)–1, ಲಿಂಡಾ ಇವಾನ್ಸ್ (ಇಂಗ್ಲೆಂಡ್) –2, ಕಾಲ: 2ಗಂ, 25ನಿ,01.3ಸೆ; ಮಾಸ್ಟರ್ಸ್: ಕ್ರಿಸ್ಟೋಫರ್ ಹೇ–1, ಬಾರ್ನ್ ಸುಟೇನ್ಸ್ –2, ಗೌತಮ್ ರಾಜಾ (ಭಾರತ)–3. ಲಾರೆನ್ಸ್–4, ವಿನೀತ್ (ಭಾರತ)–5, ಲವಕೇಶ್–6 ಕಾಲ: 2ಗಂ, 14ನಿ, 03.5ಸೆ;
ಟೀಮ್ ಟೈಮ್ ಟ್ರಯಲ್ಸ್: ಇಂಗ್ಲೆಂಡ್ –1, ಸೆಮಿಪ್ರೋ ಟೂರ್–2, ಸ್ಪೆಕ್ಟ್ರಮ್–3, ಕಾಲ: 15ಗಂ, 26ನಿ, 5ಸೆ;
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.