ಹೈದರಾಬಾದ್ (ಪಿಟಿಐ): ರೆಲೋಫ್ ವಾನ್ ಡರ್ ಮೆರ್ವ್ (73) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸಾಮರ್ಸೆಟ್ ತಂಡ ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವು ಪಡೆಯಿತು.
ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್ ಮಾಡಿದ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 161 ರನ್ ಪೇರಿಸಿತು. ಇಂಗ್ಲೆಂಡ್‌ನ ಕೌಂಟಿ ತಂಡ ಸಾಮರ್ಸೆಟ್ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 164 ರನ್ ಗಳಿಸಿ ಜಯ ಸಾಧಿಸಿತು.
40 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದ ಮೆರ್ವ್ ಸಾಮರ್ಸೆಟ್ ತಂಡದ ಗೆಲುವಿನ ರೂವಾರಿ ಎನಿಸಿದರು. ಅರ್ಹತಾ ಹಂತದ ಪಂದ್ಯದಲ್ಲೂ ನೈಟ್ ರೈಡರ್ಸ್ ಈ ತಂಡದ ಕೈಯಲ್ಲಿ ಸೋಲು ಅನುಭವಿಸಿತ್ತು. 13 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 119 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಸಾಮರ್ಸೆಟ್ ಬಳಿಕ ಅಲ್ಪ ಆತಂಕದ ಕ್ಷಣಗಳನ್ನು ಎದುರಿಸಿತಾದರೂ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು.
ಇದಕ್ಕೂ ಮೊದಲು ಜಾಕ್ ಕಾಲಿಸ್ (74) ತೋರಿದ ಉತ್ತಮ ಬ್ಯಾಟಿಂಗ್ ನೆರವಿನಿಂದ ನೈಟ್ ರೈಡರ್ಸ್ ಸವಾಲಿನ ಮೊತ್ತ ಪೇರಿಸಿತ್ತು. ಕಾಲಿಸ್ 61 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದಂತೆ ಒಟ್ಟು 74 ರನ್ ಗಳಿಸಿದರು.
ಆರಂಭಿಕ ಆಘಾತ ಒಡ್ಡಿದ ಸಾಮರ್ಸೆಟ್ ತಂಡದ ಲೆವಿಸ್ ಗ್ರೆಗೊರಿ (9ಕ್ಕೆ2) ಬಿಸ್ಲಾ ಅವರನ್ನು ಬೇಗನೆ ಪೆವಿಲಿಯನ್‌ಗೆ ಆಟ್ಟಿದರು. ಆಗ ತಂಡದ ಮೊತ್ತ ಕೇವಲ 20. ಇದಾದ ಎರಡು ಎಸೆತಗಳಲ್ಲಿ ಗ್ರೆಗೊರಿ ಮತ್ತೆ `ಕೈ~ ಚಳಕ ತೋರಿಸಿದರು. ಇವರಿಗೆ ವಿಕೆಟ್ ಒಪ್ಪಿಸಿದ್ದು ನಾಯಕ ಗೌತಮ್ ಗಂಭೀರ್. ಫಿಟ್‌ನೆಸ್ ಸಮಸ್ಯೆಯಿಂದ ಅರ್ಹತಾ ಹಂತದಲ್ಲಿ ಆಡದಿದ್ದ ಗಂಭೀರ್ ಮೊದಲ ಎಸೆತದಲ್ಲೇ ಔಟಾದರು.
ತಂಡ ಸಂಕಷ್ಟಕ್ಕೆ ಸಿಲುಕಿದಾಗ ಕಾಲಿಸ್ ಆಸರೆಯಾದರು. ಯೂಸುಫ್ ಪಠಾಣ್ ಜೊತೆಗೂಡಿ 93 ರನ್ ಕಲೆ ಹಾಕಿದರು. ಈ ಜೋಡಿ ಕೇವಲ 22 ಎಸೆತಗಳಲ್ಲಿ 50 ರನ್ ಗಳಿಸಿತು. ಅರುಲ್ ಸುಪ್ಪಯ್ಯ ಅವರ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ ಪಠಾಣ್ 21 ಎಸೆತಗಳಲ್ಲಿ 39 ರನ್ ಗಳಿಸಿದರು.
ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 161
ಮನ್ವಿಂದರ್ ಬಿಸ್ಲಾ ಸಿ ಜೋನೆಸ್ ಬಿ ಗ್ರೆಗೊರಿ 17
ಜಾಕ್ ಕಾಲಿಸ್ ಔಟಾಗದೆ 74
ಗೌತಮ್ ಗಂಭೀರ್ ಸಿ ಥಾಮಸ್ ಬಿ ಗ್ರೆಗೊರಿ 00
ಮನೋಜ್ ತಿವಾರಿ ಸಿ ಡೊಕ್ರೆಲ್ ಬಿ ಥಾಮಸ್ 20
ಯೂಸುಫ್ ಪಠಾಣ್ ಔಟಾಗದೆ 39
ಇತರೆ: (ಲೆಗ್ ಬೈ-4, ವೈಡ್-6, ನೋ ಬಾಲ್) 11
ವಿಕೆಟ್ ಪತನ: 1-20 (ಬಿಸ್ಲಾ; 2.4), 2-21 (ಗಂಭೀರ್; 2.6), 3-71 (ತಿವಾರಿ; 12.1).
ಬೌಲಿಂಗ್ ವಿವರ: ಅಲ್ಫೊನ್ಸೊ ಥಾಮಸ್ 4-0-34-1, ಮುರಳಿ ಕಾರ್ತಿಕ್ 4-0-25-0, ಲೆವಿಸ್ ಗ್ರೆಗೊರಿ 2-0-9-2, ಪೀಟರ್ ಟ್ರೆಗೊ 1-0-6-0, ರೆಲೋಫ್ ವಾನ್ ಡರ್ ಮರ್ವ್ 4-0-21-0, ಜಾರ್ಜ್ ಡಾರ್ಕೆಲ್ 4-0-32-0, ಅರುಲ್ ಸುಪ್ಪಯ್ಯ 1-0-30-0.
ಸಾಮರ್ಸೆಟ್: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 164
ಕ್ರಿಸ್ ಜೋನ್ಸ್ ಸಿ ತಿವಾರಿ ಬಿ ಇಕ್ಬಾಲ್ ಅಬ್ದುಲ್ಲಾ 06
ಪೀಟರ್ ಟ್ರೆಗೊ ರನೌಟ್ 28
ರೆಲೋಫ್ ವಾನ್ ಡರ್ ಮೆರ್ವ್ ಸಿ ಮತ್ತು ಬಿ ಶಕೀಬ್ 73
ಜೇಮ್ಸ ಹಿಲ್ಡ್ರೆಟ್ ಸಿ ಬಿಸ್ಲಾ ಬಿ ರಜತ್ ಭಾಟಿಯಾ 00
ನಿಕ್ ಕಾಂಪ್ಟನ್ ಔಟಾಗದೆ 19
ಅರುಲ್ ಸುಪ್ಪಯ್ಯ ಬಿ ರಜತ್ ಭಾಟಿಯಾ 15
ಸ್ಟೀವ್ ಸ್ನೆಲ್ ಔಟಾಗದೆ 06
ಇತರೆ: (ಬೈ-4, ಲೆಗ್‌ಬೈ-8, ವೈಡ್-5) 17
ವಿಕೆಟ್ ಪತನ: 1-15 (ಜೋನ್ಸ್; 1.1), 2-120 (ಟ್ರೆಗೊ; 13.1), 3-121 (ಮೆರ್ವ್; 13.5), 4-123 (ಹಿಲ್ಡ್ರೆತ್; 14.1), 5-141 (ಸುಪ್ಪಯ್ಯ; 16.5)
ಬೌಲಿಂಗ್: ಬ್ರೆಟ್ ಲೀ 4-0-27-0, ಇಕ್ಬಾಲ್ ಅಬ್ದುಲ್ಲಾ 4-0-29-1, ಶಕೀಬ್ ಅಲ್ ಹಸನ್ 4-0-30-1, ಲಕ್ಷ್ಮೀಪತಿ ಬಾಲಾಜಿ 3-0-23-0, ಜಾಕ್ ಕಾಲಿಸ್ 1-0-16-0, ರಜತ್ ಭಾಟಿಯಾ 3.4-0-27-2
ಫಲಿತಾಂಶ: ಸಾಮರ್ಸೆಟ್‌ಗೆ 5 ವಿಕೆಟ್ ಜಯ; ಪಂದ್ಯಶ್ರೇಷ್ಠ: ವಾನ್ ಡರ್ ಮೆರ್ವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.