ADVERTISEMENT

ಪಂಕಜ್ ಅಡ್ವಾಣಿ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಪುಣೆ (ಪಿಟಿಐ): ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾ ರಂಭ ಮಾಡಿದರು. ಭಾನುವಾರ ನಡೆದ ಮೊದಲ ಪಂದ್ಯ ದಲ್ಲಿ ಅವರು 32-100, 103-22, 100-0, 101- 35 ರಲ್ಲಿ ಡಿ. ಭುವನೇಶ್ವರನ್ ವಿರುದ್ಧ ಗೆಲುವು ಪಡೆದರು.

ಫೈನಲ್‌ಗೆ ವರ್ಷಾ ಸಂಜೀವ್: ಕರ್ನಾಟಕದ ವರ್ಷಾ ಸಂಜೀವ್ ಸಬ್ ಜೂನಿಯರ್ ಬಾಲಕಿಯರ ಸ್ನೂಕರ್ ಸ್ಪರ್ಧೆ ಹಾಗೂ ಜೂನಿಯರ್ ಬಾಲಕಿಯರ ಬಿಲಿಯರ್ಡ್ಸ್ ಸ್ಪರ್ಧೆಯ ಫೈನಲ್ ಪ್ರವೇಶಿಸಿದರು. ಶನಿವಾರ ಸಬ್ ಜೂನಿಯರ್ ವಿಭಾಗದ ಬಿಲಿಯರ್ಡ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಅವರು ಪ್ರಶಸ್ತಿ `ಟ್ರೆಬಲ್~ ಕನಸಿನಲ್ಲಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.