ADVERTISEMENT

ಪಾಕ್‌ಗೆ ಸೋಲು; ಜಯ ಇಂಗ್ಲೆಂಡ್ ಪಾಲು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:25 IST
Last Updated 18 ಫೆಬ್ರುವರಿ 2011, 18:25 IST

ಫತುಲ್ಲಾ (ಪಿಟಿಐ): ವಿಶ್ವಕಪ್‌ನಲ್ಲಿ ತಾವು ಚಾಂಪಿ ಯನ್ ಪಟ್ಟ ಪಡೆಯುವ ನೆಚ್ಚಿನ ತಂಡಗಳ ಪಟ್ಟಿ ಯಲ್ಲಿ ಇರುವುದಾಗಿ ಸಾರಿ ಹೇಳಿರುವ ಇಂಗ್ಲೆಂಡ್ ತಂಡದವರು ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿ ತಮ್ಮ ಶಕ್ತಿ ಏನೆಂದು ಸಾಬೀತುಪಡಿಸಿದ್ದಾರೆ.

ಖಾನ್ ಸಾಹೇಬ್ ಒಸ್ಮಾನ್ ಅಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕ್ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿತ್ತು. ಆದರೆ ಎಲ್ಲ ಲೆಕ್ಕಾಚಾರವನ್ನು ಹುಸಿಯಾಗಿಸಿದ ಇಂಗ್ಲೆಂಡ್ ತಂಡದವರು 67 ರನ್‌ಗಳ ಅಂತರದ ವಿಜಯ ಸಾಧಿಸಿ, ವಿಶ್ವಕಪ್ ಕಾರ್ಯಾಚರಣೆಗೆ ಮುನ್ನವೇ ವಿಶ್ವಾಸದಿಂದ ಬೀಗಿದರು.

274 ರನ್‌ಗಳ ಗೆಲುವಿನ ಗುರಿಯನ್ನು ಪಡೆದ ಪಾಕ್ ತಂಡಕ್ಕೆ ಇಪ್ಪತ್ತೆಂಟನೇ ಓವರ್ ಹೊತ್ತಿಗಾಗಲೇ ಸೋಲಿನ ಸುಳಿವು ಸಿಕ್ಕಿತು. ಐದು ಮಹತ್ವದ ವಿಕೆಟ್‌ಗಳ ಪತನದಿಂದ ಹೆಚ್ಚಿದ ಒತ್ತಡವನ್ನು ನಿಭಾಯಿಸುವಲ್ಲಿಯೂ ಪಾಕಿಸ್ತಾನ ವಿಫಲವಾಯಿತು. ಆನಂತರ ಗುರಿಯ ಕಡೆಗೆ ನಡೆಯುವ ಹಾದಿಯು ಭಾರಿ ಕಷ್ಟದ್ದಾಯಿತು.
ಇಂಗ್ಲೆಂಡ್ ತಂಡದವರು 49.4 ಓವರುಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ನೀಡಿದ 273 ರನ್‌ಗಳ ಗುರಿಯೇ ಪಾಕ್‌ಗೆ ದೊಡ್ಡ ಪರ್ವತದಂತೆ ಕಾಣಿಸಿತು. ಆ ಎತ್ತರವನ್ನು ಏರಿ ವಿಜಯ ಪತಾಕೆ ಹಾರಿಸುವಂಥ ಸತ್ವವುಳ್ಳ ಬ್ಯಾಟಿಂಗ್ ಸಾಧ್ಯವಾಗ ಲಿಲ್ಲ. ಪಾಕ್ 46.1 ಓವರುಗಳಲ್ಲಿ 206 ರನ್ ಮಾತ್ರ ಗಳಿಸಿ ಆಲ್‌ಔಟ್ ಆಯಿತು. ಯೂನಿಸ್ ಖಾನ್ (80; 168 ನಿ., 101 ಎ., 8 ಬೌಂಡರಿ, 1 ಸಿಕ್ಸರ್) ಅವರ ಶ್ರಮವೂ ವ್ಯರ್ಥವೆನಿಸಿತು.

ಈ ಹಗಲು-ರಾತ್ರಿ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತನ್ನ ಬೌಲರ್‌ಗಳ ಮೇಲಿನ ಭಾರಿ ವಿಶ್ವಾಸದೊಂದಿಗೆ ಎದುರಾಳಿಗಳಿಗೆ ಮೊದಲು ಬ್ಯಾಟಿಂಗ್ ಮಾಡಲು ಹೇಳಿತು.

ಆದರೆ ಇಂಗ್ಲೆಂಡ್ ತನ್ನ ಪಾಲಿನ ಓವರುಗಳಲ್ಲಿ ಕೇವಲ ಎರಡು ಎಸೆತ ಗಳು ಬಾಕಿ ಇರುವವರೆಗೆ ಇನಿಂಗ್ಸ್ ವಿಸ್ತರಿಸಿತು. ಕೆವಿನ್ ಪೀಟರ್ಸನ್ (66; 118 ನಿ., 78 ಎ., 3 ಬೌಂಡರಿ, 1 ಸಿಕ್ಸರ್) ಹಾಗೂ ಪಾಲ್ ಕಾಲಿಂಗ್‌ವುಡ್ (65; 91 ನಿ., 73 ಎ., 3 ಬೌಂಡರಿ) ಅವರು ಸಮ ಯೋಚಿತ ಆಟವಾಡಿ ಇಂಗ್ಲೆಂಡ್ ತಂಡದ ಇನಿಂಗ್ಸ್ ಕಟ್ಟಿ ದರು. ಇಯಾನ್ ಬೆಲ್, ರವಿ ಬೋಪರಾ ಹಾಗೂ ಮಟ್ ಪ್ರಿಯೊರ್ ಅವರೂ ರನ್ ಮೊತ್ತ ಹೆಚ್ಚಿಸಲು ತಮ್ಮದೇ ಕೊಡುಗೆ ನೀಡಿದರು.ಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 49.4 ಓವರು ಗಳಲ್ಲಿ 273 (ಕೆವಿನ್ ಪೀಟರ್ಸನ್ 66, ಪಾಲ್ ಕಾಲಿಂಗ್ ವುಡ್ 65,  ಮಟ್ ಪ್ರಿಯೊರ್ 24; ಶೋಯಬ್ ಅಖ್ತರ್ 62ಕ್ಕೆ1, ಜುನೈದ್ ಖಾನ್ 44ಕ್ಕೆ3, ವಹಾಬ್ ರಿಯಾಜ್ 52ಕ್ಕೆ3, ಸಯೀದ್ ಅಜ್ಮಲ್ 50ಕ್ಕೆ2, ಅಬ್ದುರ್ ರೆಹಮಾನ್ 52ಕ್ಕೆ1); ಪಾಕಿಸ್ತಾನ: 46.1 ಓವರುಗಳಲ್ಲಿ 206 (ಕಮ್ರನ್ ಅಕ್ಮಲ್ 18, ಯೂನಿಸ್ ಖಾನ್ 80, ಅಸದ್ ಶಫೀಕ್ 12, ಅಹ್ಮದ್ ಶೆಹ್ಜಾದ್ 26, ಮಿಸ್ಬಾ ಉಲ್ ಹಕ್ 25, ವಹಾಬ್ ರಿಯಾಜ್ 11; ಸ್ಟುವರ್ಟ್ ಬ್ರಾಡ್ 25ಕ್ಕೆ5, ಪಾಲ್ ಕಾಲಿಂಗ್‌ವುಡ್ 48ಕ್ಕೆ3);
ಫಲಿತಾಂಶ: ಇಂಗ್ಲೆಂಡ್‌ಗೆ 67 ರನ್‌ಗಳ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.