ADVERTISEMENT

ಪಾಕ್‌ ತಂಡದ ಮೇಲುಗೈ

ಕ್ರಿಕೆಟ್‌: ಜುನೈದ್‌, ಭಟ್ಟಿ ಪ್ರಭಾವಿ ದಾಳಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಅಬುಧಾಬಿ (ರಾಯಿಟರ್ಸ್‌): ಪಾಕಿಸ್ತಾನ ತಂಡದವರು ಇಲ್ಲಿ ನಡೆಯುತ್ತಿ ರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ಮೇಲುಗೈ ಸಾಧಿಸಿದ್ದಾರೆ.
ಅಬುಧಾಬಿಯ ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಶ್ರೀಲಂಕಾ ತಂಡದವರು ಎರಡನೇ ಇನಿಂಗ್ಸ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ.

179 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿರುವ ಈ ತಂಡದವರು ಮೂರನೇ ದಿನದಾಟದ ಅಂತ್ಯಕ್ಕೆ 61.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿದ್ದಾರೆ. ಪಾಕ್‌ ತಂಡದ ಜುನೈದ್‌ ಖಾನ್‌ ಹಾಗೂ ಬಿಲ್ವಾಲ್‌ ಭಟ್ಟಿ ಪ್ರಭಾವಿ ಬೌಲಿಂಗ್‌ ಪ್ರದರ್ಶನ ನೀಡಿದರು. ಲಂಕಾದ ಕೌಶಲ್‌ ಸಿಲ್ವಾ ಹಾಗೂ ಕುಮಾರ ಸಂಗಕ್ಕಾರ ಅರ್ಧ ಶತಕ ಗಳಿಸಿದರು.

ಇದಕ್ಕೂ ಮುನ್ನ ಪಾಕ್‌ ತನ್ನ ಮೊದಲ ಇನಿಂಗ್ಸ್‌ನಲ್ಲಿ 129.1 ಓವರ್‌ಗಳಲ್ಲಿ 383 ರನ್‌ ಗಳಿಸಿತು. ನಾಯಕ ಮಿಸ್ಬಾ ಉಲ್‌  ಹಕ್‌ 135 ರನ್‌ ಗಳಿಸಿದರು. 306 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್‌ ಹಾಗೂ 16 ಬೌಂಡರಿ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ ಮೊದಲ ಇನಿಂಗ್ಸ್‌ 65 ಓವರ್‌ಗಳಲ್ಲಿ 204 ಹಾಗೂ  61.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 186 (ದಿಮತ್‌ ಕರುಣರತ್ನೆ 24, ಕೌಶಲ್‌ ಸಿಲ್ವಾ 81, ಕುಮಾರ ಸಂಗಕ್ಕಾರ 55; ಜುನೈದ್‌ ಖಾನ್‌ 46ಕ್ಕೆ2, ಬಿಲ್ವಾಲ್‌ ಭಟ್ಟಿ 65ಕ್ಕೆ2);  ಪಾಕಿಸ್ತಾನ ಮೊದಲ ಇನಿಂಗ್ಸ್‌ 129.1 ಓವರ್‌ಗಳಲ್ಲಿ 383 (ಮಿಸ್ಬಾ ಉಲ್‌ ಹಕ್ 135; ಸುರಂಗ ಲಕ್ಮಲ್‌ 99ಕ್ಕೆ2, ಶಮಿಂದಾ ಎರಂಗಾ 80ಕ್ಕೆ3, ರಂಗನಾ ಹೆರತ್‌ 93ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.