ADVERTISEMENT

ಪೀಟರ್ಸನ್ ಆಟಕ್ಕೆ ಮಾಹೇಲ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ನವದೆಹಲಿ (ಐಎಎನ್‌ಎಸ್): ಡೆಕ್ಕನ್  ಚಾರ್ಜರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಶತಕ ಗಳಿಸಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಗೆಲುವಿಗೆ ಕಾರಣರಾದ ಕೆವಿನ್ ಪೀಟರ್ಸನ್ ಆಟದ ಬಗ್ಗೆ ಉಪನಾಯಕ ಮಾಹೇಲ ಜಯವರ್ಧನೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

`ಐಪಿಎಲ್‌ನಲ್ಲಿ ಇದೊಂದು ನಾನು ಕಂಡ ಅತ್ಯುತ್ತಮ ಪ್ರದರ್ಶನ. ಕೆವಿನ್ ಆಕರ್ಷಕ ಇನಿಂಗ್ಸ್ ಕಟ್ಟಿದರು~ ಎಂದು ಅವರು ಹೇಳಿದ್ದಾರೆ.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ   ಪೀಟರ್ಸನ್ ಕೇವಲ 64 ಎಸೆತಗಳಲ್ಲಿ 103 ರನ್ ಗಳಿಸಿದ್ದರು. ಈ ಮೂಲಕ ಡೇರ್‌ಡೆವಿಲ್ಸ್ ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಐದನೇ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ನಾಯಕ ವೀರೇಂದ್ರ ಸೆಹ್ವಾಗ್ ಅವರನ್ನು ಮಾಹೇಲ ಸಮರ್ಥಿಸಿಕೊಂಡಿದ್ದಾರೆ.


`ಸೆಹ್ವಾಗ್ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ಅವರು ಸಮರ್ಥ ನಾಯಕ. ಆದರೆ ಪ್ರತಿ ಪಂದ್ಯದಲ್ಲಿಯೂ ಇದೇ ರೀತಿ ಆಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT