ADVERTISEMENT

ಪ್ರಶಸ್ತಿ ಎತ್ತಿಹಿಡಿದ ಗೊಫಿನ್‌

ರಾಯಿಟರ್ಸ್
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ಪ್ರಶಸ್ತಿ ಗೆದ್ದ ಡೇವಿಡ್‌ ಗೊಫಿನ್ (ಬಲ) ಹಾಗೂ ರನ್ನರ್ ಅಪ್ ಅದ್ರಿಯನ್ ಮನ್ನಾರಿನೊ –ಎಎಫ್‌ಪಿ ಚಿತ್ರ
ಪ್ರಶಸ್ತಿ ಗೆದ್ದ ಡೇವಿಡ್‌ ಗೊಫಿನ್ (ಬಲ) ಹಾಗೂ ರನ್ನರ್ ಅಪ್ ಅದ್ರಿಯನ್ ಮನ್ನಾರಿನೊ –ಎಎಫ್‌ಪಿ ಚಿತ್ರ   

ಟೋಕಿಯೊ: ಬೆಲ್ಜಿ ಯಂನ ನಾಲ್ಕನೇ ಶ್ರೇಯಾಂಕದ ಆಟ ಗಾರ ಡೇವಿಡ್ ಗೊಫಿನ್‌ ಜಪಾನ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಗೊಫಿನ್ 6–3, 7–5ರಲ್ಲಿ ಫ್ರೆಂಚ್‌ ಆಟಗಾರ ಅದ್ರಿಯನ್ ಮನ್ನಾ ರಿನೊ ಅವರನ್ನು ಮಣಿಸಿದರು.

ಗೊಫಿನ್ ಇಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಹೋದ ವರ್ಷ ಫೈನಲ್‌ನಲ್ಲಿ ನಿಕ್ ಕ್ರಿಗೊಸ್ ವಿರುದ್ಧ ಸೋಲು ಕಂಡಿದ್ದರು. ಗೊಫಿನ್ ಮೊದಲ ಸೆಟ್‌ನಲ್ಲಿ ಆರಂಭದಿಂದಲೇ ಚುರುಕಿನ ಆಟದ ಮೂಲಕ ಗಮನಸೆಳೆದರು.

ADVERTISEMENT

3–1ರಲ್ಲಿ ಮುನ್ನಡೆ ಪಡೆದ ಬಳಿಕ ತಾಳ್ಮೆಯಿಂದ ಆಡಿದರು. ತಮ್ಮ ಸರ್ವ್‌ನಲ್ಲಿ 25ರಲ್ಲಿ 21 ಪಾಯಿಂಟ್ಸ್ ಕಲೆಹಾಕಿದರು. ಮುನ್ನಾರಿನೊ ಎರಡನೇ ಸೆಟ್‌ ನಲ್ಲಿ ಅಮೋಘ ಸಾಮರ್ಥ್ಯದಿಂದ ಪೈಪೋಟಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.