ADVERTISEMENT

ಫಿಕ್ಸಿಂಗ್ನಲ್ಲಿ ಇನ್ನಷ್ಟು ಆಟಗಾರರು?

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಲಂಡನ್ (ಪಿಟಿಐ): ಅಕ್ಮಲ್ ಸಹೋದರರು ಒಳಗೊಂಡಂತೆ ಪಾಕಿಸ್ತಾನದ ಮತ್ತೆ ಮೂವರು ಆಟಗಾರರ ಹೆಸರು `ಸ್ಪಾಟ್ ಫಿಕ್ಸಿಂಗ್~ ಆರೋಪದಲ್ಲಿ ಕೇಳಿಬಂದಿದೆ.


ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಪಾಕಿಸ್ತಾನದ ಮೂವರು ಆಟಗಾರರಾದ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೇರ್ `ಸ್ಪಾಟ್ ಫಿಕ್ಸಿಂಗ್~ನಲ್ಲಿ ಭಾಗಿಯಾಗಿದ್ದರು.

ಇದೀಗ ಅವರು ಇಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ವಿಚಾರಣೆಯ ವೇಳೆ ಪಾಕ್ ತಂಡದ ಇನ್ನೂ ಮೂವರು ಆಟಗಾರರ ಹೆಸರು ಬೆಳಕಿಗೆ ಬಂದಿದೆ. ಅವರೆಂದರೆ ಕಮ್ರಾನ್ ಅಕ್ಮಲ್, ಉಮರ್ ಅಕ್ಮಲ್ ಹಾಗೂ ವಹಾಬ್ ರಿಯಾಜ್.

ಇಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆ ಗುರುವಾರ ಆರಂಭವಾಗಿತ್ತು. ಎರಡನೇ ದಿನವಾದ ಶುಕ್ರವಾರ ಈ ಆಟಗಾರರ ಹೆಸರು ಕೇಳಿಬಂದಿದೆ.

ಪಾಕ್ ತಂಡದ ಆರು ಆಟಗಾರರು ತನ್ನ `ಹಿಡಿತ~ದಲ್ಲಿದ್ದಾರೆ ಎಂದು ಬುಕ್ಕಿ ಮಜರ್ ಮಜೀದ್ ತಿಳಿಸಿರುವುದಾಗಿ ವಿಚಾರಣೆ ವೇಳೆ ಪ್ರಾಸಿಕ್ಯೂಟರ್ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಬಟ್ ಮತ್ತು ಆಸಿಫ್ ಎರಡನೇ ದಿನದ ವಿಚಾರಣೆ ವೇಳೆಯೂ `ತಾವು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿಲ್ಲ~ ಎಂಬ ಮಾತನ್ನು ಪುನರುಚ್ಚರಿಸಿದ್ದಾರೆ.
ಸಲ್ಮಾನ್ ಬಟ್, ಮೊಹಮ್ಮದ್ ಅಮೇರ್ ಹಾಗೂ ಮೊಹಮ್ಮದ್ ಅಸಿಫ್ ಅವರು `ಸ್ಪಾಟ್ ಫಿಕ್ಸಿಂಗ್~ನಲ್ಲಿ ಸಿಕ್ಕಿ ಬಿದ್ದಿರುವುದರಿಂದ ಅಮಾನತು ಶಿಕ್ಷೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT