ADVERTISEMENT

ಫಿಫಾ ರ‍್ಯಾಂಕಿಂಗ್‌: ಜರ್ಮನಿಗೆ ಅಗ್ರಸ್ಥಾನ

ಏಜೆನ್ಸೀಸ್
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST

ಪ್ಯಾರಿಸ್‌: ಹಾಲಿ ವಿಶ್ವ ಚಾಂಪಿಯನ್‌ ಜರ್ಮನಿ ಫಿಫಾ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಗಳಿಸಿದೆ. ಇದು ಈ ಬಾರಿಯ ವಿಶ್ವಕಪ್‌ನಲ್ಲಿ ತಂಡದ ಮನೋಬಲ ಹೆಚ್ಚಿಸಲಿದೆ.

ಗಾಯದಿಂದ ಚೇತರಿಸಿಕೊಂಡಿರುವ ಗೋಲ್‌ಕೀಪರ್‌ ಮ್ಯಾನ್ಯುವೆಲ್‌ ನ್ಯೂಯರ್‌ ಮರಳಿರುವುದು ಕೂಡ ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಜರ್ಮನಿ ತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಐದು ಬಾರಿ ವಿಶ್ವಕಪ್ ಗೆದ್ದಿರುವ ಬ್ರೆಜಿಲ್‌ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು ಬೆಲ್ಜಿಯಂ ಮೂರನೇ ಸ್ಥಾನ ಗಳಿಸಿದೆ. ಪೋರ್ಚುಗಲ್ ಮತ್ತು ಅರ್ಜೆಂಟೀನಾ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

ವಿಶ್ವಕಪ್‌ಗೆ ಆತಿತ್ಯ ವಹಿಸುತ್ತಿರುವ ರಷ್ಯಾ 70ನೇ ಸ್ಥಾನ ಗಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.