ಅಲೆಕ್ಸಾಂಡ್ರಿಯಾ: ಉತ್ತಮ ಆಟ ಮುಂದುವರಿಸಿರುವ ಭಾರತ ತಂಡದವರು 16 ವರ್ಷದ ಒಳಗಿನವರ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ 3–1 ಗೋಲುಗಳಿಂದ ಅಲೆಕ್ಸಾಂಡ್ರಿಯಾ ಮೌಹಾ ಕ್ಲಬ್ ಎದುರು ಗೆಲುವು ಪಡೆದರು.
ಭಾರತ ಮತ್ತು ಈಜಿಪ್ಟ್‌ನ ಸ್ಥಳೀಯ ಕ್ಲಬ್‌ಗಳ ನಡುವೆ ನಡೆಯುತ್ತಿರುವ ಸೌಹಾರ್ದ ಫುಟ್‌ಬಾಲ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ ಇದಾಗಿದೆ. ಮೊದಲ ಪಂದ್ಯದಲ್ಲಿಯೂ ಭಾರತ ಜಯ ಸಾಧಿಸಿತ್ತು.
ಹಿಂದಿನ ಪಂದ್ಯದಲ್ಲಿ ಚುರುಕಿನ ಆಟದ ಮೂಲಕ ಗಮನ ಸೆಳೆದಿದ್ದ ಭರ ವಸೆಯ ಯುವ ಆಟಗಾರ ರೋಹಿತ್ ದಾನು ಹ್ಯಾಟ್ರಿಕ್ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು.
ಈಜಿಪ್ಟ್‌ಗೆ ಮೊದಲ ಬಾರಿಗೆ ಭೇಟಿ ನೀಡಿರುವ ಭಾರತ ತಂಡದವರು ಇಲ್ಲಿನ ಬೇರೆ ಬೇರೆ ಕ್ಲಬ್‌ಗಳ ಜೊತೆ ಹಲವು ಪಂದ್ಯಗಳನ್ನು ಆಡಲಿದ್ದಾರೆ. ಭಾರತ ಏಪ್ರಿಲ್ 27ರಂದು ಮುಂದಿನ ಪಂದ್ಯ ಆಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.