
ಪ್ರಜಾವಾಣಿ ವಾರ್ತೆಬೆಂಗಳೂರು: ಇಂದಿರಾನಗರ ಕ್ಲಬ್ ಮತ್ತು ಪರಿಕ್ರಮ ತಂಡಗಳು ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ‘ಸಿ’ ಡಿವಿಷನ್ ಫುಟ್‌ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿವೆ.
ಬಸವನಗುಡಿ ಬಿಯುಎಫ್‌ಸಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಿಕ್ರಮ ತಂಡ 2–1 ಗೋಲುಗಳಿಂದ ಇಂಡಿಯನ್ ನೈಟ್ಸ್‌್ ಎದುರು ಗೆಲುವು ಸಾಧಿಸಿತು. ಸಂತೋಷ್ (22ನೇ ನಿಮಿಷ) ಮತ್ತು ಬೆನ್ನಿ (43ನೇ ನಿ.) ಗೆಲುವಿನ ರೂವಾರಿ ಎನಿಸಿದರು.
ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಇಂದಿರಾನಗರ ಕ್ಲಬ್ 5–4 ಗೋಲುಗಳಿಂದ ಸಿಟಿ ಕ್ಲಬ್ ಎದುರು ಜಯಭೇರಿ ಮೊಳಗಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.