ADVERTISEMENT

ಫುಟ್‌ಬಾಲ್ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ಬೆಂಗಳೂರು: ಎಂಡೆ ಕ್ರಿಯೇಷನ್ಸ್ ಹಾಗೂ ಬಿಯುಎಫ್‌ಸಿ ಆಶ್ರಯದಲ್ಲಿ ಏಪ್ರಿಲ್ 2ರಿಂದ ಮೇ 30ರ ವರೆಗೆ ಫುಟ್‌ಬಾಲ್ ತರಬೇತಿ ಶಿಬಿರ ನಡೆಯಲಿದೆ.

10, 12, 14 ಹಾಗೂ  16 ವರ್ಷದೊಳಗಿನವರ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ತರಬೇತಿ ಜರುಗಲಿದೆ. 

 ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನ ಬಿಯುಎಫ್‌ಸಿ ಕ್ರೀಡಾಂಗಣದಲ್ಲಿ ಈ ಶಿಬಿರ ಆಯೋಜನೆಯಾಗಿದೆ. ಭಾರತ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಫುಟ್‌ಬಾಲ್ ಕೋಚ್ ಚೈತ್ರಾ ಗಂಗಾಧರನ್ ಇತರರು ತರಬೇತಿ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಬಿ. ಕಮಲ್ 9448308225 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ರಿಕೆಟ್ ಶಿಬಿರ

ಬೆಂಗಳೂರು: ಫೋರ್ಟ್ ಕ್ರಿಕೆಟ್ ಅಕಾಡೆಮಿಯು ಏಪ್ರಿಲ್ 1ರಿಂದ ಮೇ 31ರ ವರೆಗೆ ಬಾಲಕರಿಗಾಗಿ ಬೇಸಿಗೆ ಕ್ರಿಕೆಟ್ ಶಿಬಿರ ಆಯೋಜಿಸಿದೆ.

ಚಾಮರಾಜಪೇಟೆಯಲ್ಲಿರುವ ಫೋರ್ಟ್ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ತರಬೇತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಮುಖ್ಯ ಕೋಚ್ ಬಿ.ಎಸ್. ವಿಶ್ವನಾಥ್ (9449110066) ಮತ್ತು ಎಂ. ಜಯಪ್ರಕಾಶ್ (9620275620) ಅವರನ್ನು ಸಂಪರ್ಕಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.