ADVERTISEMENT

ಫೈನಲ್‌ಗೆ ಭೂಪತಿ- ರೋಹನ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 19:30 IST
Last Updated 11 ನವೆಂಬರ್ 2012, 19:30 IST
ಫೈನಲ್‌ಗೆ ಭೂಪತಿ- ರೋಹನ್
ಫೈನಲ್‌ಗೆ ಭೂಪತಿ- ರೋಹನ್   

ಲಂಡನ್ (ಪಿಟಿಐ): ಭಾರತದ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ ಇಲ್ಲಿ ನಡೆಯುತ್ತಿರುವ `ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್~ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದರು.

ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭೂಪತಿ ಮತ್ತು ರೋಹನ್ 4-6, 6-1, 12-10 ರಲ್ಲಿ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ವಿರುದ್ಧ ರೋಚಕ ಗೆಲುವು ಪಡೆದರು.ಭಾರತದ ಜೋಡಿ ಸೋಮವಾರ ನಡೆಯುವ ಫೈನಲ್‌ನಲ್ಲಿ ಮಾರ್ಸೆಲ್ ಗ್ರಾನೊಲ್ಲೆರ್ಸ್‌- ಮಾರ್ಕ್ ಲೊಪೆಜ್ ಅಥವಾ ಜೊನಾಥನ್ ಮರ‌್ರೆ- ಫ್ರೆಡ್ರಿಕ್ ನೀಲ್ಸನ್ ವಿರುದ್ಧ ಪೈಪೋಟಿ ನಡೆಸಲಿದೆ.

ವಿಜಯ್ ಅಮೃತ್‌ರಾಜ್ 1977 ರಲ್ಲಿ ಕೊನೆಯದಾಗಿ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಆ ಬಳಿಕ ಭಾರತದ ಯಾವುದೇ ಆಟಗಾರ ಇಲ್ಲಿ ಚಾಂಪಿಯನ್ ಆಗಿಲ್ಲ. ಇದೀಗ ಭೂಪತಿ ಮತ್ತು ರೋಹನ್‌ಗೆ ಐತಿಹಾಸಿಕ ಸಾಧನೆ ಮಾಡುವ ಅವಕಾಶ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.