ADVERTISEMENT

ಬಸಂತ್ ಕಪ್ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಮೈಸೂರು: ಇನ್ನರ್‌ವ್ಹೀಲ್ ಕ್ಲಬ್ (ಮೈಸೂರು ಸೆಂಟ್ರಲ್), ಅಖಿಲ ಭಾರತ ಟೆನಿಸ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಏಪ್ರಿಲ್ 27ರಿಂದ ಮೇ 4ರವರೆಗೆ `ಬಸಂತ್ ಕಪ್-2012~ ಅಖಿಲ ಭಾರತ ರಾಷ್ಟ್ರೀಯ ರ‌್ಯಾಂಕಿಂಗ್ ಚಾಂಪಿಯನ್‌ಷಿಪ್ ಸಿರೀಸ್ ಟೆನಿಸ್ ಟೂರ್ನಿ ನಡೆಯಲಿದೆ.

ಮೈಸೂರು ಟೆನಿಸ್ ಕ್ಲಬ್‌ನ ಸಿಂಥೆಟಿಕ್ ಕೋರ್ಟ್‌ಗಳಲ್ಲಿ ನಡೆಯಲಿರುವ ಟೂರ್ನಿಯಲ್ಲಿ 16 ಮತ್ತು 18 ವರ್ಷದೊಳಗಿನ ವಯೋಮಿತಿ ಬಾಲಕ-ಬಾಲಕಿಯರ ವಿಭಾಗದ ಪಂದ್ಯಗಳು ನಡೆಯಲಿವೆ.
 
ದೇಶದ ವಿವಿಧ ರಾಜ್ಯಗಳಿಂದ 400 ಆಟಗಾರರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘಟನಾ ಅಧ್ಯಕ್ಷೆ ಪೂರ್ಣಿಮಾ ವಿಶ್ವನಾಥ್ ತಿಳಿಸಿದರು.

ಏಪ್ರಿಲ್ 27 ಮತ್ತು 28ರಂದು ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.