ADVERTISEMENT

ಬಾಕ್ಸಿಂಗ್: ಪದಕದತ್ತ ಸರ್ಜುಬಾಲಾ

ಪಿಟಿಐ
Published 13 ಜನವರಿ 2017, 19:30 IST
Last Updated 13 ಜನವರಿ 2017, 19:30 IST
ಸರ್ಜುಬಾಲಾ ದೇವಿ
ಸರ್ಜುಬಾಲಾ ದೇವಿ   

ನವದೆಹಲಿ:  ಭಾರತದ ಸರ್ಜುಬಾಲಾ ದೇವಿ, ಪ್ರಿಯಾಂಕಾ ಚೌಧರಿ, ಪೂಜಾ, ಕವಿತಾ ಗೋಯತ್‌, ಸೀಮಾ ಪೂನಿಯಾ 6ನೇ ರಾಷ್ಟ್ರೀಯ ಕಪ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಪದಕ ಖಚಿತ ಪಡಿಸಿಕೊಂಡಿದ್ದಾರೆ.

ಸರ್ಬಿಯಾದ ವರ್ಬಾಸ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ಸೆಮಿಫೈನಲ್‌ ತಲುಪಿದ್ದಾರೆ. ಸೀಮಾ ಪೂನಿಯಾ 81 ಕೆ.ಜಿ ವಿಭಾಗದ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಟೂರ್ನಿಯಲ್ಲಿ ಒಟ್ಟು 18 ರಾಷ್ಟ್ರಗಳ ತಂಡಗಳು ಭಾಗವಹಿಸಿವೆ. 69ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂಜಾ ಬೈ ಪಡೆದು ಸೆಮಿಗೆ ಲಗ್ಗೆಯಿಟ್ಟರು.

ಸರ್ಜುಬಾಲಾ 48ಕೆ.ಜಿ ವಿಭಾಗದಲ್ಲಿ ಸ್ಥಳೀಯ ಆಟಗಾರ್ತಿ ಕಟಾರಿನಾ ಜುರೋವಿಕ್ ವಿರುದ್ಧ ಜಯ ದಾಖಲಿಸಿದರು. 60ಕೆ.ಜಿ ವಿಭಾಗದಲ್ಲಿ ಪ್ರಿಯಾಂಕಾ 3–0ರಲ್ಲಿ ಲುಥುವೇನಿಯಾದ ವೈದಾ ಮಸಿಯೊಕೈತ್‌ ಮೇಲೆ ಗೆದ್ದರು. 75ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕವಿತಾ ರಷ್ಯಾದ ಓಲ್ಗಾ ಲಪೆಖಾ ಅವರನ್ನು ಮಣಿಸಿದರು. ಇದರಿಂದಾಗಿ ಭಾರತಕ್ಕೆ ಮತ್ತೊಂದು ಪದಕ ಒಲಿಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.