ADVERTISEMENT

ಬಾಕ್ಸಿಂಗ್: ಭಾರತಕ್ಕೆ 4 ಕಂಚು ಖಚಿತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:59 IST
Last Updated 6 ಜುಲೈ 2013, 19:59 IST

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತದ ಮನೋಜ್ ಕುಮಾರ್ ಸೇರಿದಂತೆ ನಾಲ್ವರು ಬಾಕ್ಸರ್‌ಗಳು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ನಾಲ್ಕು ಕಂಚಿನ ಪದಕಗಳು ಖಚಿತವಾಗಿವೆ.

64 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಮನೋಜ್, ಒಲಿಂಪಿಯನ್ ಎಲ್. ದೇವೀಂದ್ರೂ ಸಿಂಗ್ (49 ಕೆ.ಜಿ. ವಿಭಾಗ), ಶಿವಾ ಥಾಪಾ (56 ಕೆ.ಜಿ.) ಮತ್ತು ಮನ್‌ದೀಪ್ ಜಾಂಗ್ರಾ (69 ಕೆ.ಜಿ.) ನಾಲ್ಕರ ಘಟ್ಟ ಪ್ರವೇಶಿಸಿರುವ ಭಾರತದ ಬಾಕ್ಸರ್‌ಗಳು. ಆದರೆ, 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಸುಖದೀಪ್ ಸಿಂಗ್ ನಿರಾಸೆ ಅನುಭವಿಸಿದರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.