ADVERTISEMENT

ಬಿಎಫ್‌ಸಿ–ಯುನೈಟೆಡ್‌ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಕಲ್ಯಾಣಿ, ಪಶ್ಚಿಮ ಬಂಗಾಳ, (ಐಎಎನ್‌ಎಸ್‌): ತನ್ನ ಮೊದಲ ಐ -ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಬೆಂಗ ಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಗುರುವಾರ ಇಲ್ಲಿ ನಡೆ ಯಲಿರುವ  ಪಂದ್ಯದಲ್ಲಿ ಯುನೈಟೆಡ್‌ ಸ್ಪೋರ್ಟ್ಸ್‌ ಕ್ಲಬ್‌ ಎದುರು ಪೈಪೋಟಿ ನಡೆಸಲಿದ್ದು, ಗೆಲುವಿನ ಓಟ ಮುಂದು ವರಿಸುವ ವಿಶ್ವಾಸದಲ್ಲಿದೆ.

ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಸುನಿಲ್ ಚೆಟ್ರಿ ಸಾರಥ್ಯದ ಬಿಎಫ್‌ಸಿ ಬಳಿ  34 ಪಾಯಿಂಟ್‌ ಗಳಿವೆ. ಜೊತೆಗೆ ಹಿಂದಿನ ಪಂದ್ಯದಲ್ಲಿ ಚರ್ಚಿಲ್‌ ಬ್ರದರ್ಸ್‌ ತಂಡವನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದೆ.‘ಎಲ್ಲಿಯೇ ಆಗಲಿ ಒಂದು ಸೋಲು ಎದುರಾದಾಗ ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದರ ಮೇಲೆ ಮುಂದಿನ ಗೆಲುವು ಅವಲಂಬಿತವಾಗಿರುತ್ತದೆ. ನಮ್ಮ ತಂಡ ಪೂರ್ಣ ವಿಶ್ವಾಸದಿಂದ ಕೂಡಿದೆ’ ಎಂದು ಬಿಎಫ್‌ಸಿ ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ಹೇಳಿದ್ದಾರೆ. ಬಿಎಫ್‌ಸಿ 18 ಪಂದ್ಯಗಳನ್ನು ಆಡಿದ್ದು 10ರಲ್ಲಿ ಗೆಲುವು ಸಾಧಿಸಿದೆ.

ನಾಲ್ಕು ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿವೆ. ಹಾಲಿ ಚಾಂಪಿಯನ್‌ ಚರ್ಚಿಲ್‌ ಎದುರು ಗೆಲುವು ಸಾಧಿಸಲು ಕಾರಣರಾದ ನಾಯಕ ಚೆಟ್ರಿ ಮತ್ತು ರಾಬಿನ್‌ ಸಿಂಗ್‌ ತಂಡದ ಪ್ರಮುಖ ಶಕ್ತಿ ಎನಿಸಿದ್ದಾರೆ. ತವರು ನೆಲದ ಅಂಗಳದಲ್ಲಿ ಅಭಿಮಾನಿಗಳ ಬೆಂಬಲದಿಂದ ಅಮೋಘ ಪ್ರದರ್ಶನ ತೋರಿದ್ದ ಚೆಟ್ರಿ ಬಳಗ ಮತ್ತೊಮ್ಮೆ ಅದೇ ರೀತಿಯ ಆಟವಾಡು ವ ಭರವಸೆ ಮೂಡಿಸಿದೆ. ಜೊತೆಗೆ ಅಗ್ರಸ್ಥಾನ ಗಟ್ಟಿ ಮಾಡಿಕೊಳ್ಳುವ ಗುರಿ ಹೊಂದಿದೆ. ಯುನೈಟೆಡ್‌ ಕ್ಲಬ್‌ ಹಿಂದಿನ ಐದು ಪಂದ್ಯಗಳಲ್ಲಿ  ಒಮ್ಮೆಯೂ ಗೆಲುವು ಪಡೆಯಲಾಗದೆ ನಿರಾಸೆ ಅನುಭವಿಸಿದೆ. ಆದ್ದರಿಂದ ಈ ಪಂದ್ಯದಲ್ಲಿ ಜಯ ಪಡೆಯುವ ಆಸೆ ಹೊಂದಿದೆ.

ಹೋದ ವಾರ ನಡೆದ ರಂಗದೇಜಿದ್‌ ಎದುರಿನ ಪಂದ್ಯದಲ್ಲಿ ಯುನೈಟೆಡ್‌್ 0–4  ಗೋಲುಗಳಿಂದ ನಿರಾಸೆ ಕಂಡಿತ್ತು. ಅದರ ಹಿಂದಿನ ಪಂದ್ಯಗಳಲ್ಲಿ ಶಿಲ್ಲಾಂಗ್‌ ಲಾಜಿಂಗ್‌, ಮುಂಬೈ ಕ್ಲಬ್‌, ಈಸ್ಟ್‌ ಬೆಂಗಾಲ್ ಹಾಗೂ ಮಹಮ್ಮಡನ್‌ ಎದುರು ಡ್ರಾ ಸಾಧಿಸಿತ್ತು. ಆದ್ದರಿಂದ ಬಿಎಫ್‌ಸಿ ಎದುರು ಈಗ ಗೆಲುವು ಪಡೆಯುವ ಪಣ ತೊಟ್ಟಿದೆ. 18 ಪಂದ್ಯಗಳನ್ನು ಆಡಿರುವ ಯುನೈಟೆಡ್‌್ ನಾಲ್ಕರಲ್ಲಿ ಮಾತ್ರ ಗೆಲುವು ಪಡೆದಿದೆ. ಎಂಟು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.