ADVERTISEMENT

ಬಿಲಿಯರ್ಡ್ಸ್: ಪಂಕಜ್‌ಗೆ ಸತತ ನಾಲ್ಕನೇ ಗೆಲುವು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2016, 19:30 IST
Last Updated 4 ಮಾರ್ಚ್ 2016, 19:30 IST
ಬಿಲಿಯರ್ಡ್ಸ್: ಪಂಕಜ್‌ಗೆ ಸತತ ನಾಲ್ಕನೇ ಗೆಲುವು
ಬಿಲಿಯರ್ಡ್ಸ್: ಪಂಕಜ್‌ಗೆ ಸತತ ನಾಲ್ಕನೇ ಗೆಲುವು   

ಕೊಲಂಬೊ (ಪಿಟಿಐ):  ಹದಿನೈದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಾಲ್ಕನೇ ಪಂದ್ಯವನ್ನು ಗೆದ್ದರು.

ರೌಂಡ್ ರಾಬಿನ್ ಲೀಗ್‌ ಪಂದ್ಯದಲ್ಲಿ ಪಂಕಜ್ 101–72, 103–2, 100–27, 101–18 ಫ್ರೇಮ್‌ಗಳಿಂದ ಥಾಯ್ಲೆಂಡ್‌ನ ಸೂರ್ಯ ಸುವಾನಸಿಂಗ್ ವಿರುದ್ಧ ಜಯಗಳಿಸಿದರು. ಇದರೊಂದಿಗೆ  ಅವರು 16–0 ಫ್ರೇಮ್‌ಗಳನ್ನು ಗಳಿಸಿದ್ದಾರೆ. ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದರು. ಈ ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಇದೆ.

ಈ ಪಂದ್ಯದಲ್ಲಿ ಅವರು ನಾಲ್ಕು ಬ್ರೇಕ್‌ಗಳನ್ನು (81, 85, 61,80) ಗಳಿಸಿದರು.

ಇಂಡೋನೇಷ್ಯಾದ ಜಕಾ ಕುರ್ನಿಯಾವಾನ್ 12 ಫ್ರೇಮ್‌ಗಳನ್ನು ಗಳಿಸಿ, ಎರಡನೇ ಸ್ಥಾನದಲ್ಲಿದ್ದಾರೆ. ಜಕಾ ಶನಿವಾರ ಪಂಕಜ್ ಎದುರು ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.