ನವದೆಹಲಿ (ಪಿಟಿಐ): ‘ಅಂತಿಮ ಹನ್ನೊಂದರ ಪಟ್ಟಿಯ ಬದಲು ಬೆಂಚ್‌ನಲ್ಲಿ ಕುಳಿತು ಕಾಲ ಕಳೆಯಲೂ ನಾನು ಸಿದ್ಧ’ ಎಂದು ಹೇಳುವ ಮೂಲಕ ಪಾಕ್ ವೇಗಿ ಶೋಯಬ್ ಅಖ್ತರ್, ಎರಡನೇ ವಿಶ್ವಕಪ್ ಗೆಲ್ಲುವ ಅಭಿಯಾನಕ್ಕೆ ತಮ್ಮ ನೆರವು ಸಿಗುವುದಿಲ್ಲ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಕಳೆದ ಗುರುವಾರದ ಪಂದ್ಯದ ನಂತರದ 35 ವರ್ಷ ವಯಸ್ಸಿನ ಬೌಲರ್ ಅಖ್ತರ್ ತಮ್ಮ ಬೂಟುಗಳನ್ನು ಬಿಚ್ಚಿಟ್ಟು ಕಾಲುಗಳಿಗೆ ವಿಶ್ರಾಂತಿ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.
ಈಗಾಗಲೇ ನಿವೃತ್ತಿ ಘೋಷಿಸಿರುವ ಅವರು, ಶನಿವಾರ ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೆ ಅವರನ್ನು ತಂಡಕ್ಕೆ ಪರಿಗಣಿಸಿರಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಎರಡು ಕ್ಯಾಚ್‌ಗಳನ್ನು ಬಿಟ್ಟ ಕಮ್ರನ್ ಅಕ್ಮಲ್ ಜೊತೆಗೆ ಅಖ್ತರ್ ಮಾತಿನ ಚಕಮಕಿ ನಡೆಸಿದ್ದು ಇದಕ್ಕೆ ಕಾರಣವೆನ್ನಲಾಗುತ್ತಿದೆ. ಈ ಪಂದ್ಯದಲ್ಲಿ ಪಾಕ್ ಸೋತಿತ್ತು. ‘ಜೂನಿಯರ್ ಆಟಗಾರರಿಗೆ ಅವಕಾಶ ಕೊಡಲು ಇಚ್ಛಿಸುತ್ತೆನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.