ADVERTISEMENT

ಬೆಳ್ಳಿ ಗೆದ್ದ ಮಹಿಳೆಯರ ತಂಡ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಪದಕದ ಸಾಧನೆ ಮಾಡಿರುವ ರಾಜ್ಯದ ಪುರುಷ ಮತ್ತು ಮಹಿಳೆಯರ ತಂಡ (ಕುಳಿತವರು; ಕೆ.ಎಸ್‌. ಸಾಹಿತ್ಯಾ, ನಿಶಿತಾ, ಶಾಲಿನಿ, ವಿ.ಸಿ.ರೋಶಿನಿ, ಹರ್ಷಿತಾ, ಮಾನಸ (ನಾಯಕಿ), ಚಂದ್ರಕಲಾ, ಸಿಂಧು, ವಿ.ನಯನಾ, ದಿವ್ಯಾ, ನಂದಿನಿ, ಸಿಂಚನಾ, ರಂಜಿತಾ (ನಿಂತವರು); ಭಾನುಪ್ರಕಾಶ್‌, ಮನೋಜ್‌, ನಿತಿನ್‌, ಗಿರೀಶ್‌, ಆದಿತ್ಯಾ, ಚೇತನ್‌ (ನಾಯಕ), ಸಕ್ಷತ್‌, ಸುಜಿತ್‌, ಪವನ್‌ ಕುಮಾರ್‌, ರಾಕೇಶ್‌, ಚಂದ್ರಶೇಖರ್‌.

ಬೆಂಗಳೂರು: ಕರ್ನಾಟಕ ಮಹಿಳೆಯರ ತಂಡವು ಹರಿಯಾಣದಲ್ಲಿ ನಡೆದ 35ನೇ ಸೀನಿಯರ್ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿತು. ಪುರುಷರ ತಂಡ ಕಂಚಿನ ಪದಕ ಪಡೆಯಿತು.

ಫೈನಲ್‌ ಪಂದ್ಯದಲ್ಲಿ ಮಹಿಳೆಯರ ತಂಡ 31–35ರಲ್ಲಿ ಹರಿಯಾಣದ ಎದುರು ನಿರಾಸೆ ಅನುಭವಿಸಿತು. ಸೆಮಿಫೈನಲ್‌ನಲ್ಲಿ ಈ ತಂಡ 28–9ರಲ್ಲಿ ಪಶ್ಚಿಮ ಬಂಗಾಳ ಎದುರು ಗೆದ್ದು ಫೈನಲ್‌ ಪ್ರವೇಶಿಸಿತ್ತು.

ಪುರುಷರ ತಂಡ ಸೆಮಿಫೈನಲ್‌ನಲ್ಲಿ 19–31ರಲ್ಲಿ ಹರಿಯಾಣ ವಿರುದ್ಧ ಸೋತಿದೆ. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ 32–30ರಲ್ಲಿ ದೆಹಲಿ ತಂಡಕ್ಕೆ ಸೋಲುಣಿಸಿತ್ತು.

ADVERTISEMENT

ಕರ್ನಾಟಕದ ಪುರುಷ ಮತ್ತು ಮಹಿಳೆಯರ ತಂಡಗಳು ಚಂಡೀಗಡದಲ್ಲಿ ನಡೆಯುವ ಫೆಡರೇಷನ್‌ ಕಪ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.