
ರೋಮ್ (ಐಎಎನ್‌ಎಸ್): ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಆಘಾತಕ್ಕೆ ಒಳಗಾಗಿದ್ದಾರೆ. ಈ ಆಘಾತ ನೀಡಿದ್ದು ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್.
ರೋಮ್ ಡೈಮಂಡ್ ಲೀಗ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೋಲ್ಟ್ ಅವರನ್ನು ಹಿಂದಿಕ್ಕಿದ ಗ್ಯಾಟ್ಲಿನ್ ಅಗ್ರಸ್ಥಾನ ಪಡೆದರು. ಇದು ಯುರೋಪಿಯನ್ ಸರ್ಕಿಟ್‌ನ ಮೊದಲ ರೇಸ್ ಆಗಿತ್ತು.
31 ವರ್ಷ ವಯಸ್ಸಿನ ಗ್ಯಾಟ್ಲಿನ್ ಈ ದೂರವನ್ನು 9.94 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಎರಡನೇ ಸ್ಥಾನ ಪಡೆದ 26 ವರ್ಷ ವಯಸ್ಸಿನ ಬೋಲ್ಟ್ 9.95 ಸೆಕೆಂಡ್ ತೆಗೆದುಕೊಂಡರು.
`ಈ ಬಗ್ಗೆ ನನಗೆ ಖಂಡಿತ ನಿರಾಸೆ ಆಗಿಲ್ಲ. ಪ್ರಮುಖ ಚಾಂಪಿಯನ್‌ಷಿಪ್‌ಗಳಿಗೆ ಸಿದ್ಧರಾಗಲು ನನಗೆ ಇನ್ನೂ ಎರಡು ತಿಂಗಳು ಬೇಕು' ಎಂದು ಬೋಲ್ಟ್ ಪ್ರತಿಕ್ರಿಯಿಸಿದ್ದಾರೆ.
`ಸೋಲಿನಿಂದ ಹೆಚ್ಚಿನ ವಿಷಯ ಕಲಿಯಬಹುದು. ಎಲ್ಲಿ ಎಡವಿದ್ದೇನೆ ಎಂಬುದನ್ನು ಪತ್ತೆ ಹಚ್ಚಬಹುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.