ನವದೆಹಲಿ (ಪಿಟಿಐ): ಭಾರತದ ಸಾಯಿ ಪ್ರಣೀತ್ ಹಾಗೂ ಸಮೀರ್ ವರ್ಮ ಮಂಗಳವಾರ ಇಲ್ಲಿ ಆರಂಭವಾದ ಯೊನೆಕ್ಸ್ ಸನ್‌ರೈಸ್ ಭಾರತ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಅರ್ಹತಾ ಸುತ್ತಿನಲ್ಲೇ ಸೋಲು ಕಂಡಿದ್ದಾರೆ.
ಸಿರಿ ಪೋರ್ಟ್ ಕ್ರೀಡಾ ಸಮುಚ್ಛಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಪ್ರಣೀತ್ 21-19, 19-21, 21-23ರಲ್ಲಿ ಥಾಯ್ಲೆಂಡ್‌ನ ಸಪಾನ್ಯಾಯು ಅವಿಹಿಂಗ್‌ಸನೋನ್ ಎದುರು ಸೋಲು ಕಂಡರು. ಸಮೀರ್ 21-17, 23-25, 14-21ರಲ್ಲಿ ರಷ್ಯಾದ ವ್ಲಾಡಿಮಿರ್ ಇವಾನೊವ್ ಎದುರು ಪರಾಭವಗೊಂಡರು.
ಆದರೆ ಮಹಿಳೆಯರ ವಿಭಾಗದಲ್ಲಿ ಅರುಂಧತಿ ಹಾಗೂ ನೇಹಾ ಪಂಡಿತ್ ಪ್ರಧಾನ ಹಂತದಲ್ಲಿ ಆಡಲು ಅರ್ಹತೆ ಪಡೆದುಕೊಂಡರು. ಎರಡನೇ ಅರ್ಹತಾ ಹಂತದ ಪಂದ್ಯದಲ್ಲಿ ಅರುಂಧತಿ 19-21, 21-13, 21-18ರಲ್ಲಿ ಸ್ವಿಟ್ಜರ್ಲೆಂಡ್‌ನ ಸಬ್ರಿನಾ ಜಾಕೆಟ್ ಎದುರು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.