ADVERTISEMENT

ಬ್ಯಾಡ್ಮಿಂಟನ್: ಭಾರತಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ):  ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿರುವ ಸೈನಾ ನೆಹ್ವಾಲ್ ಕಳಪೆ ಪ್ರದರ್ಶನ ನೀಡಿದರು. ಇದರಿಂದ ಉಬೆರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ 0-5ರಲ್ಲಿ ಚೀನಾದ ಎದುರು ಸೋಲು ಕಂಡಿತು.

ಬುಧವಾರ ನಡೆದ ಪಂದ್ಯದಲ್ಲಿ ಸೈನಾ19-21, 19-21ರಲ್ಲಿ ವಿಶ್ವದ ಆರನೇ ಶ್ರೇಯಾಂಕದ ಯಂಜಿಯಿವೊ ಜಿಯಾಂಗ್ ಎದುರು ನಿರಾಸೆ ಅನುಭವಿಸಿದರು. ಡಬಲ್ಸ್‌ನ್ಲ್ಲಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ನಿರಾಸೆ ಕಂಡಿತು. ಪಿ.ವಿ. ಸಿಂಧು, ಪ್ರಜಕ್ತಾ ಸಾವಂತ್ ಸಹ ಇದೇ ಹಾದಿ ತುಳಿದರು.

ಪುರುಷರಿಗೂ ನಿರಾಸೆ: ಪುರುಷ ತಂಡ ಮಕಾವ್‌ನಲ್ಲಿ ನಡೆಯುತ್ತಿರುವ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಏಷ್ಯಾ ವಲಯದ ಪಂದ್ಯದಲ್ಲಿ 2-3ರಲ್ಲಿ ಇಂಡೋನೇಷ್ಯಾದ ಎದುರು ನಿರಾಸೆ ಅನುಭವಿಸಿತು.

ಸಿಂಗಲ್ಸ್‌ನಲ್ಲಿ ಬಿ. ಸಾಯಿ ಪ್ರಣೀತ್, ಡಬಲ್ಸ್ ವಿಭಾಗದಲ್ಲಿ ರೂಪೇಶ್ ಕುಮಾರ್ ಹಾಗೂ ಸನಾವೇ ಥಾಮಸ್ ಜೋಡಿ ಗೆಲುವು ಸಾಧಿಸಿತು. ಆದರೆ, ಆನಂದ್ ಪವಾರ್, ಅಕ್ಷಯ್ ದೇವಲ್ಕರ್ ಮತ್ತು ಪ್ರಣವ್ ಚೋಪ್ರಾ ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.