ADVERTISEMENT

ಬ್ಯಾಡ್ಮಿಂಟನ್‌ ಮಿಶ್ರ ಡಬಲ್ಸ್: ಚಿನ್ನದ ಕನಸು ನನಸಾಗಿಸಿ ಭಾರತ ತಂಡ

ಪಿಟಿಐ
Published 9 ಏಪ್ರಿಲ್ 2018, 15:21 IST
Last Updated 9 ಏಪ್ರಿಲ್ 2018, 15:21 IST
ಭಾರತ ತಂಡ ಗೆಲುವು ಸಂಭ್ರಮಿಸಿದ ಕ್ಷಣ: ಪಿಟಿಐ ಚಿತ್ರ
ಭಾರತ ತಂಡ ಗೆಲುವು ಸಂಭ್ರಮಿಸಿದ ಕ್ಷಣ: ಪಿಟಿಐ ಚಿತ್ರ   

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತ ಬ್ಯಾಡ್ಮಿಂಟನ್‌ ತಂಡದ ಕನಸು ಸೋಮವಾರ ಕೈಗೂಡಿತು.

ಸೋಮವಾರ ನಡೆದ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಚಿನ್ನ ಗೆಲ್ಲುವ ಹಾದಿಯಲ್ಲಿ ಹೆಜ್ಜೆ ಹಾಕಿದ ಭಾರತ ತಂಡ ಮಲೇಷ್ಯಾ ವಿರುದ್ಧ ಗೆಲುವು ಸಾಧಿಸಿ ತನ್ನ ಕನಸನ್ನು ನನಸಾಗಿಸಿಕೊಂಡಿತು.

ಗುರಿಯೊಂದಿಗೆ ಕಣಕ್ಕಿಳಿದಿದ್ದ ಭಾರತಕ್ಕೆ ಕರ್ನಾಟಕದ ಅಶ್ವಿನಿ ‍ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಗೆಲುವು ತಂದುಕೊಟ್ಟರು.

ADVERTISEMENT

ಪೆಂಗ್‌ ಸೂನ್‌ ಚಾನ್‌ ಮತ್ತು ಲಿಯು ಯಾಂಗ್‌ ಗೋಹ್‌ ವಿರುದ್ಧ ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 21-14 15-21 21-15ರಲ್ಲಿ ಪಂದ್ಯ ಗೆದ್ದುಕೊಂಡರು.

ಕ್ಯಾರರಾ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಮಿಶ್ರ ತಂಡ ವಿಭಾಗದ ಸೆಮಿಫೈನಲ್‌ ಹೋರಾಟದಲ್ಲಿ ಭಾರತ 3–1ರಿಂದ ಸಿಂಗಪುರ ಸವಾಲು ಮೀರಿ ಫೈನಲ್‌ಗೆ ಲಗ್ಗೆ ಇಟ್ಟ ಸಾಧನೆ ಮಾಡಿತ್ತು.

ಭಾರತ ತಂಡ ಗೆಲುವು ಸಂಭ್ರಮಿಸಿದ ಕ್ಷಣ: ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.