ADVERTISEMENT

ಬ್ಯಾಡ್ಮಿಂಟನ್‌: ಸೆಮಿಯಲ್ಲಿ ಸೋತ ಮನು–ಸುಮಿತ್‌

ಪಿಟಿಐ
Published 12 ಮೇ 2018, 19:30 IST
Last Updated 12 ಮೇ 2018, 19:30 IST

ಸಿಡ್ನಿ: ಮನು ಅತ್ರಿ ಮತ್ತು ಬಿ.ಸುಮಿತ್‌ ರೆಡ್ಡಿ ಅವರು ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಕ್ವೆಯೆ ಸೆಂಟರ್‌ ಒಲಿಂಪಿಕ್‌ ಪಾರ್ಕ್‌ ಅಂಗಳದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮನು ಮತ್ತು ಸುಮಿತ್‌ 17–21, 15–21ರ ನೇರ ಗೇಮ್‌ಗಳಿಂದ ಇಂಡೊನೇಷ್ಯಾದ ಬೆರಿ ಅಂಗ್ರಿಯವಾನ್‌ ಮತ್ತು ಹಾರ್ಡಿಯಾಂಟೊ ವಿರುದ್ಧ ಸೋತರು. ಈ ಹೋರಾಟ 39 ನಿಮಿಷ ನಡೆಯಿತು.

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಮನು ಮತ್ತು ಸುಮಿತ್‌ ಆರಂಭಿಕ ಗೇಮ್‌ನಲ್ಲಿ ಎದುರಾಳಿಗಳಿಗೆ ಪ್ರಬಲ ಸ್ಪರ್ಧೆ ಒಡ್ಡಿದರು. ಹೀಗಾಗಿ 17–17ರ ಸಮಬಲ ಕಂಡುಬಂತು. ನಂತರ ಚುರುಕಾಗಿ ನಾಲ್ಕು ಪಾಯಿಂಟ್ಸ್‌ ಗಳಿಸಿದ ಇಂಡೊನೇಷ್ಯಾದ ಜೋಡಿ ಗೇಮ್‌ ಜಯಿಸಿತು.

ADVERTISEMENT

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಬೆರಿ ಮತ್ತು ಹಾರ್ಡಿಯಾಂಟೊ ಎರಡನೇ ಗೇಮ್‌ನಲ್ಲೂ ಮಿಂಚಿನ ಆಟ ಆಡಿ ಭಾರತದ ಜೋಡಿಯ ಸವಾಲು ಮೀರಿದರು.

ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಬಿ.ಸಾಯಿಪ್ರಣೀತ್‌ ಮತ್ತು ಸಮೀರ್‌ ವರ್ಮಾ ಅವರು ಶುಕ್ರವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.