ADVERTISEMENT

ಬ್ಯಾಡ್ಮಿಂಟನ್‌: ಸೈನಾ, ಪ್ರಣಯ್‌ಗೆ ಸಾರಥ್ಯ

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ನವದೆಹಲಿ: ಸೈನಾ ನೆಹ್ವಾಲ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಮುಂಬರುವ ಬಿಡಬ್ಲ್ಯುಎಫ್‌ ಉಬರ್‌ ಮತ್ತು ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ತಂಡದ ಸಾರಥ್ಯ ವಹಿಸಲಿದ್ದಾರೆ.

ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಮಂಗಳವಾರ ತಂಡ ಪ್ರಕಟಿಸಿದೆ. ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌, ಡಬಲ್ಸ್‌ ವಿಭಾಗದ ಆಟಗಾರ್ತಿಯರಾದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಉಬರ್‌ ಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಕೆನಡಾ ವಿರುದ್ಧ ಆಡಲಿದೆ. ನಂತರದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಜಪಾನ್‌ ಸವಾಲು ಎದುರಿಸಲಿದೆ.

ADVERTISEMENT

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಸೈನಾ, ವೈಷ್ಣವಿ ಜಕ್ಕಾ ರೆಡ್ಡಿ, ಕೃಷ್ಣಪ್ರಿಯ ಕುದರವಳ್ಳಿ, ಅನುರಾ ಪ್ರಭು ಮತ್ತು ವೈಷ್ಣವಿ ಭಾಲೆ ಅವರು ಸಿಂಗಲ್ಸ್‌ನಲ್ಲಿ ಸೆಣಸಲಿದ್ದಾರೆ.

ಜೆ.ಮೇಘನಾ, ಪೂರ್ವಿಶಾ ಎಸ್‌.ರಾಮ್‌, ಪ್ರಜಕ್ತಾ ಸಾವಂತ್‌ ಮತ್ತು ಸನ್ಯೋಗಿತಾ ಘೋರ್ಪಡೆ ಅವರು ಡಬಲ್ಸ್‌ನಲ್ಲಿ ಆಡಲಿದ್ದಾರೆ.

ಥಾಮಸ್‌ ಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತ ಪುರುಷರ ತಂಡ ಫ್ರಾನ್ಸ್‌ ವಿರುದ್ಧ ಸೆಣಸಲಿದೆ. ನಂತರದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಚೀನಾ ಎದುರು ಹೋರಾಡಲಿದೆ.

ಪ್ರಣಯ್‌, ಬಿ.ಸಾಯಿ ಪ್ರಣೀತ್‌, ಸಮೀರ್‌ ವರ್ಮಾ ಮತ್ತು ಲಕ್ಷ್ಯಸೇನ್‌ ಅವರು ಸಿಂಗಲ್ಸ್‌ನಲ್ಲಿ ಸೆಣಸಲಿದ್ದಾರೆ.

ಬಿ. ಸುಮಿತ್‌ ರೆಡ್ಡಿ, ಮನು ಅತ್ರಿ, ಶ್ಲೋಕ್‌ ರಾಮಚಂದ್ರನ್‌, ಎಂ.ಆರ್‌.ಅರ್ಜುನ್‌, ಸನ್ಯಮ್‌ ಶುಕ್ಲಾ ಮತ್ತು ಅರ್ಜುನ್‌ ಜಾರ್ಜ್‌ ಅವರು ಡಬಲ್ಸ್‌ನಲ್ಲಿ ಆಡಲಿದ್ದಾರೆ.

ಥಾಮಸ್‌ ಮತ್ತು ಉಬರ್‌ ಕಪ್‌ ಟೂರ್ನಿ ಮೇ 20ರಿಂದ 27ರವರೆಗೆ ಬ್ಯಾಂಕಾಕ್‌ನಲ್ಲಿ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.