ADVERTISEMENT

ಬ್ಯಾಸ್ಕೆಟ್‌ಬಾಲ್‌: ಜೈನ್‌ ಕಾಲೇಜಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಬೆಂಗಳೂರು: ಜೈನ್‌ ಕಾಲೇಜು ತಂಡ ಇಲ್ಲಿ ನಡೆಯುತ್ತಿರುವ ರಾಜ್ಯ ಕಾಲೇಜು ಲೀಗ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿದೆ. ಸರ್ಜಾಪುರದ ನ್ಯೂ ಹಾರಿಜನ್‌ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ  ಮಂಗಳವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಜೈನ್‌ ತಂಡ 91–84ರಲ್ಲಿ ಸೇಂಟ್‌ ಜೋಸೆಫ್‌ ವಾಣಿಜ್ಯ ಕಾಲೇಜು ತಂಡವನ್ನು ಮಣಿಸಿತು.

ದಿನದ ಇನ್ನೊಂದು ಪಂದ್ಯದಲ್ಲಿ ನ್ಯೂ ಹಾರಿಜನ್‌ ಎಂಜಿನಿಯರಿಂಗ್‌ ಕಾಲೇಜು 48–41ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನ ವಿರುದ್ಧ ಜಯ ಪಡೆಯಿತು. ಈ ವಿಭಾಗದ ಇತರ ಪಂದ್ಯಗಳಲ್ಲಿ ಸುರಾನ ಕಾಲೇಜು 61–26ರಲ್ಲಿ ಪಿಇಎಸ್‌ಐಟಿ ಎದುರೂ, ಎಂವಿಐಟಿ 46–42ರಲ್ಲಿ ಬಿಎಂಎಸ್‌ಸಿಇ ಮೇಲೂ ಜಯ ಗಳಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.