ನವದೆಹಲಿ (ಪಿಟಿಐ): ಅಷ್ಟೇನೂ ಗಮನಾರ್ಹವಲ್ಲದ ಪ್ರದರ್ಶನ ನೀಡಿದ ಭಾರತ ತಂಡದವರು ಚೀನಾದಲ್ಲಿ ಆರಂಭವಾದ ಎಫ್‌ಐಬಿಎ ಏಷ್ಯಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಸೋಲು ಕಂಡರು.
ಗುರುವಾರ ನಡೆದ ಪಂದ್ಯದಲ್ಲಿ `ಎ~ ಗುಂಪಿನಲ್ಲಿರುವ ಭಾರತ 68-71ಪಾಯಿಂಟ್‌ಗಳಿಂದ ಲಿಬನಾನ್ ಎದುರು ಸೋಲು ಅನುಭವಿಸಿತು.
ವಿರಾಮದ ಬಳಿಕ ಭಾರತದ ಹರೀಶ್ ಕೊರಾಠಿ 13 ಪಾಯಿಂಟ್ ಕಲೆ ಹಾಕಿದರು. ಎರಡನೇ ಪಂದ್ಯದಲ್ಲಿ ಭಾರತ ಮಲೇಷ್ಯಾ ಎದುರು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.