ADVERTISEMENT

ಬ್ಯಾಸ್ಕೆಟ್‌ಬಾಲ್: ವಿಜಯಾ ಬ್ಯಾಂಕ್, ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಶಿವಮೊಗ್ಗ: ವಿಜಯಾ ಬ್ಯಾಂಕ್ ಮತ್ತು ಮೈಸೂರಿನ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳು ಶಿವಮೊಗ್ಗ ಯೂತ್ಸ್ ಆಶ್ರಯದಲ್ಲಿ ನಡೆದ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.

ಭಾನುವಾರ ನಡೆದ ಸೆಮಿಫೈನಲ್ ಲೀಗ್‌ನ ಕೊನೆಯ ಪಂದ್ಯದಲ್ಲಿ ವಿಜಯಾ ಬ್ಯಾಂಕ್ 69-47 ರಲ್ಲಿ ಬೀಗಲ್ಸ್ ಕ್ಲಬ್ ತಂಡವನ್ನು ಮಣಿಸಿತು.
ಅಂತಿಮ ಸ್ಥಾನ: (ಪುರುಷರು) 1. ವಿಜಯಾ ಬ್ಯಾಂಕ್, 2.ಎಂಇಜಿ, 3.ಬೀಗಲ್ಸ್ ಕ್ಲಬ್, 4, ಯಂಗ್ ಓರಿಯನ್ಸ್ (ಮಹಿಳೆಯರು) 1.ಸ್ಪೋರ್ಟ್ಸ್ ಹಾಸ್ಟೆಲ್ ಮೈಸೂರು, 2. ಮೌಂಟ್ಸ್ ಕ್ಲಬ್, 3. ಐಬಿಬಿಸಿ, 4. ವಿವೇಕ್ಸ್ ಕ್ಲಬ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.