
ಪ್ರಜಾವಾಣಿ ವಾರ್ತೆಬೆಂಗಳೂರು: ವಿಜಯ ಬ್ಯಾಂಕ್ ತಂಡದವರು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಲೀಗ್ ಪಂದ್ಯದಲ್ಲಿ 54-32ಪಾಯಿಂಟುಗಳಿಂದ ಸ್ಪೋಟ್ಸ್ ಹಾಸ್ಟೆಲ್ ತಂಡದ ಎದುರು ಭರ್ಜರಿ ಗೆಲುವು ಪಡೆದರು. 
ಇತರ ಪಂದ್ಯಗಳಲ್ಲಿ ಕೆಎಸ್‌ಪಿ 81-26ರಲ್ಲಿ ಎಚ್‌ಎಎಸ್‌ಸಿ ವಿರುದ್ಧವೂ, ಯಂಗ್ ಓರಿಯನ್ಸ್ 57-55ರಲ್ಲಿ ಜಿಎಸ್‌ಸಿ ವಿರುದ್ಧವೂ, ಎಂಇಜಿ 82-33ರಲ್ಲಿ ಸೌಥರ್ನ್ ಬ್ಲ್ಯೂಸ್ ಮೇಲೂ, ಎಎಸ್‌ಸಿ 56-37ಪಾಯಿಂಟುಗಳಿಂದ ಬಿಬಿಸಿ ತಂಡವನ್ನು ಮಣಿಸಿತು.
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.