ADVERTISEMENT

ಬ್ರ್ಯಾಂಡ್‌ಮೌಲ್ಯ: ಮೆಸ್ಸಿ ಹಿಂದಿಕ್ಕಿದ ಕೊಹ್ಲಿ

ಏಜೆನ್ಸೀಸ್
Published 26 ಅಕ್ಟೋಬರ್ 2017, 20:05 IST
Last Updated 26 ಅಕ್ಟೋಬರ್ 2017, 20:05 IST

ನವದೆಹಲಿ : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬ್ರ್ಯಾಂಡ್‌ ಮೌಲ್ಯದಲ್ಲಿ ಗಾಲ್ಫ್ತಾರೆ ರೋರಿ ಮೆಕ್ಲೋರಿ ಮತ್ತು ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರನ್ನು ಮೀರಿಸಿದ್ದಾರೆ.

ಫೋಬ್ಸ್‌ ನಿಯತಕಾಲಿಕೆಯು ನಡೆಸಿದ ಸಮೀಕ್ಷೆಯ ಪಟ್ಟಿಯ ಅಗ್ರ ಹತ್ತು ಕ್ರೀಡಾಪಟುಗಳ ವಿಭಾಗದಲ್ಲಿ ಕೊಹ್ಲಿ ಏಳನೇ ಸ್ಥಾನದಲ್ಲಿದ್ದಾರೆ. ರೋರಿ ಮೆಕ್ಲೋರಿ ಎಂಟು ಹಾಗೂ ಮೆಸ್ಸಿ 9ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರು ₹ 94 ಕೋಟಿ; ರೋರಿ ₹ 88 ಕೋಟಿ, ಮೆಸ್ಸಿ ₹ 87.75 ಕೋಟಿ ಹಾಗೂ ಹತ್ತನೇ ಸ್ಥಾನದಲ್ಲಿರುವ ಸ್ಟೀಫನ್ ಕರಿ ₹ 87.10 ಕೋಟಿ ಮೌಲ್ಯ ಹೊಂದಿದ್ದಾರೆ.

ಪಟ್ಟಿಯ ಮೊದಲ ಸ್ಥಾನದಲ್ಲಿರುವ ಟೆನಿಸ್ ತಾರೆ ರೋಜರ್ ಫೆಡರರ್‌ ₹ 241 ಕೋಟಿ; ಬ್ಯಾಸ್ಕೆಟ್‌ಬಾಲ್ ಆಟಗಾರ ಲಿಬಾರ್ನ್ ಜೇಮ್ಸ್‌ ₹ 217 ಕೋಟಿ, ಅಥ್ಲೀಟ್ ಉಸೇನ್ ಬೋಲ್ಟ್ ₹ 175 ಕೋಟಿ; ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ₹139 ಕೋಟಿ; ಗಾಲ್ಫ್ ಆಟಗಾರ ಫೀಲ್ ಮಿಕೆಲ್‌ಸೆನ್ ₹ 127 ಕೋಟಿ; ಗಾಲ್ಫ್ ತಾರೆ ಟೈಗರ್ ವುಡ್ಸ್‌ ₹ 107 ಕೋಟಿ ಮೌಲ್ಯ ಹೊಂದಿದ್ದಾರೆ.

ADVERTISEMENT

ಇದರಲ್ಲಿ ಆಟಗಾರರ ವೇತನ, ಪಂದ್ಯದ ಸಂಭಾವನೆ, ಹೂಡಿಕೆಯ ಆದಾಯಗಳು ಸೇರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.