ADVERTISEMENT

ಭಾರತದ ದೇರುಗೆ ರಜತ ಪದಕ

ವಿಶ್ವ ಯುವ ವೇಟ್‌ಲಿಫ್ಟಿಂಗ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಭಾರತದ ಜಮ್ಜಂಗ್ ದೇರು ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ವಿಶ್ವ ಯುವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ರಜತ ಪದಕ ಜಯಿಸಿದ್ದಾರೆ.

ಚಾಂಪಿಯನ್‌ಷಿಪ್‌ನ ಆರಂಭದ ದಿನ ದೇರು 50 ಕೆ.ಜಿ. ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಕ್ಲೀನ್ ಹಾಗೂ ಜರ್ಕ್ ವಿಭಾಗದಲ್ಲಿ ಒಟ್ಟು 110 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 85 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾದರು. ಒಟ್ಟಾರೆ ಅವರು 195 ಕೆ.ಜಿ. ಭಾರತ ಎತ್ತಿದರು.

ಇದೇ ವಿಭಾಗದಲ್ಲಿ ಭಾರತದ ಮತ್ತೊಬ್ಬ ವೇಟ್‌ಲಿಫ್ಟರ್ ದೀಪಕ್ ಲಾತರ್ 12ನೇ ಸ್ಥಾನ ಪಡೆದರು. ಅವರು ಒಟ್ಟು 174 ಕೆ.ಜಿ. (57+78) ಭಾರ ಎತ್ತಿದರು.

ಬಾಲಕಿಯರ ವಿಭಾಗದಲ್ಲಿ ಚಂದ್ರಿಕಾ ತರಫ್ದಾರ್ ಏಳನೇ ಸ್ಥಾನ ಪಡೆದರು. 44 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 135 ಕೆ.ಜಿ.ಭಾರ ಎತ್ತಿದರು. ಪೂನಮ್ ದಲಾಲ್ 15ನೇ ಸ್ಥಾನ ಗಳಿಸಿದರು.

2014ರಲ್ಲಿ ನಡೆಯಲಿರುವ ಯುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಸ್ಥಾನ ಗಿಟ್ಟಿಸಲು ಇದು ಅರ್ಹತಾ ಚಾಂಪಿಯನ್‌ಷಿಪ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.