ADVERTISEMENT

ಭಾರತದ ಸೆಮಿಫೈನಲ್ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 16:45 IST
Last Updated 2 ಅಕ್ಟೋಬರ್ 2012, 16:45 IST

ಕೊಲಂಬೊ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್ ಎಂಟರ ತನ್ನ ಕಡೆಯ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ರೋಚಕ ಘಟ್ಟದಲ್ಲಿ 1 ರನ್‌ಗಳಿಂದ ಮಣಿಸಿತಾದರೂ  ಸೆಮಿಫೈನಲ್ ಪ್ರವೇಶಿಸಲು  ವಿಫಲವಾಯಿತು.

ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಗೆಲುವಿಗೆ ಭಾರತ ಒಡ್ಡಿದ್ದ 152 ರನ್‌ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 151 ರನ್‌ಗಳಿಸಿ ಸರ್ವಪತನ ಕಂಡಿತು. ಭಾರತ ಒಂದು ರನ್‌ಗಳ ರೋಚಕ ಜಯ ಸಾಧಿಸಿತಾದರೂ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಸೆಮಿಫೈನಲ್ ಪ್ರವೇಶಿಸಲು ಭಾರತ ದಕ್ಷಿಣ ಆಫ್ರಿಕಾವನ್ನು 121 ರನ್‌ಗಳಿಗೆ ನಿಯಂತ್ರಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.