ADVERTISEMENT

ಭಾರತವೇ ಫೇವರಿಟ್

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 19:00 IST
Last Updated 29 ಮಾರ್ಚ್ 2011, 19:00 IST
ಭಾರತವೇ ಫೇವರಿಟ್
ಭಾರತವೇ ಫೇವರಿಟ್   

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಭಾರತದಲ್ಲಿ ನಡೆಯುವ ಪಂದ್ಯವನ್ನು ವೀಕ್ಷಿಸಲು ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿದ್ದೇನೆ. ಈ ಪಂದ್ಯದ ಬಗ್ಗೆ ಎಲ್ಲೆಡೆ ಹಬ್ಬಿರುವ ಪ್ರಚಾರ, ಉತ್ಸಾಹ ಅದ್ಭುತವಾದುದು. ಭಾರತ- ಪಾಕ್ ನಡುವಿನ ಪಂದ್ಯವೆಂದರೆ ಎಲ್ಲರಲ್ಲೂ ಆಸಕ್ತಿ ಕೆರಳಿಸುತ್ತದೆ. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಈ ತಂಡಗಳು ಪೈಪೋಟಿ ನಡೆಸುತ್ತಿರುವ ಕಾರಣ ಆಸಕ್ತಿ ಇಮ್ಮಡಿಯಾಗಿದೆ. ಪಂದ್ಯದ ಕುರಿತು ನಡೆದ ಚರ್ಚೆಗಳು ಏನೇ ಇರಲಿ, ಬುಧವಾರ ಪ್ರಬಲ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.

ಭಾರತ ತಂಡ ಬುಧವಾರ ಯಾವುದೇ ಒಬ್ಬ ಆಟಗಾರರನ್ನು ನೆಚ್ಚಿಕೊಂಡು ಕಣಕ್ಕಿಳಿಯಬಾರದು. ಯುವರಾಜ್ ಸಿಂಗ್ ಆಲ್‌ರೌಂಡ್ ಪ್ರದರ್ಶನ ನೀಡುತ್ತಿರುವುದು ನಿಜ. ಆದರೆ ಅಗ್ರ ಕ್ರಮಾಂಕದ ಎಲ್ಲ ಏಳು ಬ್ಯಾಟ್ಸ್‌ಮನ್‌ಗಳು ಮಿಂಚಿದರೆ ಮಾತ್ರ ದೊಡ್ಡ ಮೊತ್ತ ಪೇರಿಸಲು ಸಾಧ್ಯ. ಪ್ರೇಕ್ಷಕರು ಸಚಿನ್ ಅವರ 100ನೇ ಶತಕವನ್ನು ಎದುರುನೋಡುತ್ತಿದ್ದಾರೆ ನಿಜ. ಆದರೆ ಶೂನ್ಯಕ್ಕೆ ಅಥವಾ 99 ರನ್‌ಗೆ ಔಟಾದರೂ ಸಚಿನ್ ಹೆಚ್ಚು ತಲೆಕೆಡಿಸಿಕೊಳ್ಳಲಿಕ್ಕಿಲ್ಲ. ಭಾರತದ ಗೆಲುವನ್ನು ಮಾತ್ರ ಸಚಿನ್ ಬಯಸುತ್ತಿದ್ದಾರೆ.

ಈ ಪಂದ್ಯದಲ್ಲಿ ಎರಡೂ ತಂಡಗಳಿಗೆ ಗೆಲುವಿನ ಅವಕಾಶ 50-50 ರಷ್ಟು ಇದೆ ಎಂದು ಕಾಣುತ್ತದೆ. ಆದರೆ ನನ್ನ ಪ್ರಕಾರ ಭಾರತ ತಂಡವೇ ಗೆಲ್ಲುವ ಫೇವರಿಟ್. ಏಕೆಂದರೆ ಕೆಲವೊಂದು ವಿಭಾಗಗಳಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಪಾಕಿಸ್ತಾನಕ್ಕಿಂತ ಹೆಚ್ಚಿನ ಬಲ ಹೊಂದಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.