ADVERTISEMENT

ಭಾರತೀಯರ ಕೊಠಡಿಯಲ್ಲಿ ಸಿರಿಂಜ್‌

ಏಜೆನ್ಸೀಸ್
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಡೇವಿಡ್‌ ಗ್ರೆವೆಮ್‌ಬರ್ಗ್‌
ಡೇವಿಡ್‌ ಗ್ರೆವೆಮ್‌ಬರ್ಗ್‌   

ಗೋಲ್ಡ್‌ ಕೋಸ್ಟ್‌, ಆಸ್ಟ್ರೇಲಿಯಾ: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಭಾರತದ ಅಥ್ಲೀಟ್‌ಗಳು ತಂಗಿದ್ದ ಕ್ರೀಡಾ ಗ್ರಾಮದ ಕೊಠಡಿಯಲ್ಲಿ ಶನಿವಾರ ಸಿರಿಂಜ್‌ಗಳು ಪತ್ತೆಯಾಗಿವೆ.

‘ಕ್ರೀಡಾ ಗ್ರಾಮದ ಸಿಬ್ಬಂದಿ ಕೊಠಡಿ ಸ್ವಚ್ಛಗೊಳಿಸುವ ವೇಳೆ ಭಾರತದ ಅಥ್ಲೀಟ್‌ಗಳು ತಂಗಿದ್ದ ಕೊಠಡಿಯಲ್ಲಿ ಸಿರಿಂಜ್‌ಗಳು ಸಿಕ್ಕಿವೆ. ಈ ಸಂಬಂಧ ತನಿಖೆ ನಡೆಸಲು ಆದೇಶಿಸಲಾಗಿದೆ’ ಎಂದು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ನ (ಸಿಜಿಎಫ್‌) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡೇವಿಡ್‌ ಗ್ರೆವೆಮ್‌ಬರ್ಗ್‌ ಹೇಳಿದ್ದಾರೆ.

‘ಉದ್ದೀಪನಾ ಮದ್ದು ಸೇವನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸಿಜಿಎಫ್‌ ವೈದ್ಯಕೀಯ ಸಮಿತಿ ಕಠಿಣ ಕ್ರಮ ಕೈಗೊಳ್ಳಲಿದೆ ’ ಎಂದಿದ್ದಾರೆ.

ADVERTISEMENT

‘2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಉದ್ದೀಪನಾ ಮದ್ದು ತಡೆ ನಿಯಮದ ಪ್ರಕಾರ ಕೂಟ ನಡೆಯುವ ಅವಧಿಯಲ್ಲಿ ಅಥ್ಲೀಟ್‌ಗಳು ಸಣ್ಣ ಸೂಜಿಯನ್ನೂ ಬಳಸುವಂತಿಲ್ಲ. ಈ ಸಂಬಂಧ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಅಥ್ಲೀಟ್‌ಗಳು ಕ್ರೀಡಾಸ್ಫೂರ್ತಿ ಮೈಗೂಡಿಸಿಕೊಳ್ಳಬೇಕು. ಗೆಲುವಿಗಾಗಿ ಅಡ್ಡದಾರಿ ಹಿಡಿಯಬಾರದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.