ADVERTISEMENT

ಭಾರತ ತಂಡಕ್ಕೆ ಜಯ

ಮಹಿಳೆಯರ ಕ್ರಿಕೆಟ್‌: ಅಭ್ಯಾಸ ಪಂದ್ಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಢಾಕಾ (ಪಿಟಿಐ): ಭಾರತ ತಂಡದವರು ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸಿದ್ಧತೆಗಾಗಿ ಇಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ  ಐರ್ಲೆಂಡ್‌ ತಂಡವನ್ನು 26 ರನ್‌ಗಳಿಂದ ಸೋಲಿಸಿದ್ದಾರೆ.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಲು ಅವಕಾಶ ಪಡೆದ ಭಾರತ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 148 ರನ್‌ ಗಳಿಸಿತು. ಮಿಥಾಲಿ ರಾಜ್‌ 34 ಎಸೆತಗಳಲ್ಲಿ 42 ರನ್‌ ಹಾಗೂ ಪೂನಮ್‌ ರಾವತ್‌ 40 ಎಸೆತಗಳಲ್ಲಿ ಅಜೇಯ 50 ರನ್‌ ಬಾರಿಸಿದರು.

ಸವಾಲಿನ ಗುರಿ ಎದುರು ಐರ್ಲೆಂಡ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 122 ರನ್‌ ಮಾತ್ರ ಗಳಿಸಿತು. ಈ ತಂಡದ ಕ್ಲೇರ್‌ ಶಿಲಿಂಗ್ಟನ್‌ 47 ರನ್‌ ಗಳಿಸಿದರು. ಆದರೆ ಉಳಿದವರು ವಿಫಲರಾದರು. ಭಾರತದ ಸ್ನೇಹಾ ಪಾಂಡೆ ಹಾಗೂ ಸೋನಿಯಾ ದಬೀರ್‌ ಬಿಗು ಬೌಲಿಂಗ್‌ ದಾಳಿ ನಡೆಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ: 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 148 (ಮಿಥಾಲಿ ರಾಜ್‌ 42, ಪೂನಮ್‌ ರಾವತ್‌ ಔಟಾಗದೆ 50); ಐರ್ಲೆಂಡ್‌: 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 122 (ಕ್ಲೇರ್‌ ಶಿಲಿಂಗ್ಟನ್‌ 47, ಎಮ್ಮಾ ಫನಾಗನ್‌ 16, ಮೆಕ್‌ಕಾರ್ತಿ ಔಟಾಗದೆ 16; ಶಿಖಾ ಪಾಂಡೆ 24ಕ್ಕೆ3, ಸೋನಿಯಾ ದಬೀರ್‌ 20ಕ್ಕೆ2). ಫಲಿತಾಂಶ: ಭಾರತಕ್ಕೆ 26 ರನ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.