ADVERTISEMENT

ಭಾರತ ಬಾಕ್ಸಿಂಗ್ ಫೆಡರೇಷನ್ ಅಮಾನತು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 10:56 IST
Last Updated 7 ಡಿಸೆಂಬರ್ 2012, 10:56 IST

ನವದೆಹಲಿ (ಐಎಎನ್‌ಎಸ್): ಭಾರತ ಹವ್ಯಾಸಿ ಬಾಕ್ಸಿಂಗ್ ಫೆಡರೇಷನ್‌ (ಐಎಬಿಎಫ್) ನಿಂದ ನಿಯಮ ಉಲ್ಲಂಘನೆ ಯಾಗಿರುವ ಸಾಧ್ಯತೆ ವ್ಯಕ್ತಪಡಿಸಿರುವ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಐಎಬಿಎಫ್ ಅನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿರಿಸಿ ಶುಕ್ರವಾರ ಆದೇಶಿಸಿದೆ.

ಭಾರತ ಒಲಿಂಪಿಕ್ ಸಂಸ್ಥೆಗೆ ನೂತನವಾಗಿ ಆಯ್ಕೆಯಾಗಿರುವ ಅಭಯ್ ಸಿಂಗ್ ಚೌತಾಲ ಅವರು ಭಾರತ ಹವ್ಯಾಸಿ ಬಾಕ್ಸಿಂಗ್ ಫೆಡರೇಷನ್ ಚುನಾವಣಾ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಭಾವಿಸಿದೆ. ಹೀಗಾಗಿ ಡಿಸೆಂಬರ್ 6ರಿಂದ  ಜಾರಿಗೆ ಬರುವಂತೆ ಭಾರತ ಹವ್ಯಾಸಿ ಬಾಕ್ಸಿಂಗ್ ಫೆಡರೇಷನ್ ಅನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದೆ.

ಪ್ರಸ್ತುತ ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿರುವ ಅಭಯ್ ಸಿಂಗ್ ಚೌತಾಲ ಅವರು ಈ ಮೊದಲು ಭಾರತ ಹವ್ಯಾಸಿ ಬಾಕ್ಸಿಂಗ್ ಫೆಡರೇಷನ್ ನಲ್ಲಿ ಮೂರು ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ಚುನಾವಣಾ ನಿಯಮ ಉಲ್ಲಂಘನೆಯಾಗಿರುವ ಸಾಧ್ಯತೆ ವ್ಯಕ್ತಪಡಿಸಿರುವ ಎಐಬಿಎ ಆ ಬಗ್ಗೆ ಪರಿಶೀಲನೆ ನಡೆಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.