ADVERTISEMENT

ಭಾರತ ಮಾತಾ ಶಾಲೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 20:04 IST
Last Updated 25 ಸೆಪ್ಟೆಂಬರ್ 2013, 20:04 IST

ಬೆಂಗಳೂರು: ಭಾರತ ಮಾತಾ ಹೈಸ್ಕೂಲು ತಂಡದವರು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಈಚೆಗೆ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕಿಯರ ಬಾಲ್‌ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಕೊಂಡರು.

ಶಂಕರಪುರಮ್‌ನ ಉದಯಭಾನು ಮೈದಾನದಲ್ಲಿ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ ಭಾರತ ಮಾತಾ ತಂಡದವರು 29-–10, 29-–07ರಿಂದ ಜೆ.ಪಿ.ನಗರದ ಇಂದಿರಾ ಪ್ರಿಯದರ್ಶಿನಿ ಶಾಲಾ ತಂಡವನ್ನು ಸೋಲಿಸಿದರು.

ಭಾರತ ಮಾತಾ ಶಾಲೆಯು ಈ ಪ್ರಶಸ್ತಿಯನ್ನು  ಸತತ 21ನೇ ವರ್ಷ ಗೆದ್ದಿರುವುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.