ನವದೆಹಲಿ (ಪಿಟಿಐ): ಮುಂದಿನ ತಿಂಗಳು ಮಲೇಷ್ಯಾದ ಇಫೋದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ ಟೂರ್ನಿಗೆ ಭಾರತ ತಂಡದ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಲಾಗಿದ್ದು, ಡ್ರ್ಯಾಗ್‌ಫ್ಲಿಕ್ಕರ್ ಸಂದೀಪ್ ಸಿಂಗ್ ಅವರನ್ನು ಕೈ ಬಿಡಲಾಗಿದೆ.
ಹೋದ ತಿಂಗಳು ನಡೆದ ವಿಶ್ವ ಹಾಕಿ ಲೀಗ್ ರೌಂಡ್-3 (ಸೆಮಿಫೈನಲ್) ಟೂರ್ನಿಗೆ ಸಂದೀಪ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಮತ್ತೆ ಅವರನ್ನು ಈಗ ಕೈಬಿಡಲಾಗಿದೆ. ಏಷ್ಯಾ ಕಪ್ ಆಗಸ್ಟ್ 24ರಿಂದ ಸೆಪ್ಟೆಂಬರ್ 1ರ ವರೆಗೆ ನಡೆಯಲಿದೆ. ಜುಲೈ 16ರಿಂದ ಒಂದು ತಿಂಗಳು ಬೆಂಗಳೂರಿನಲ್ಲಿ ಭಾರತ ತಂಡದ ಶಿಬಿರ ಆಯೋಜನೆಯಾಗಿದೆ.
ಈ ಟೂರ್ನಿಯಲ್ಲಿ `ಬಿ' ಗುಂಪಿನಲ್ಲಿ ಸ್ಥಾನ ಗಳಿಸಿರುವ ಭಾರತ ತಂಡದ ಜೊತೆಗೆ ಕೊರಿಯಾ, ಬಾಂಗ್ಲಾದೇಶ ಮತ್ತು ಓರಿಯಾ ತಂಡಗಳಿವೆ.
ಸಂಭವನೀಯ ತಂಡ: ಗೋಲ್‌ಕೀಪರ್ಸ್: ಪಿ.ಆರ್. ಶ್ರೀಜೇಶ್, ಪಿ.ಟಿ. ರಾವ್, ಶ್ರೀನಿವಾಸ ರಾವ್ ಕೆ., ನಾನಕ್ ಸಿಂಗ್, ನವೀನ್ ಕುಮಾರ್, ಜಗದೀಪ್ ದಯಾಳ್, ಅಭಿನಯ್ ಕುಮಾರ್ ಪಾಂಡೆ.
ಡಿಫೆಂಡರ್ಸ್: ವಿ.ಆರ್. ರಘುನಾಥ್, ರೂಪಿಂದರ್ ಪಾಲ್ ಸಿಂಗ್, ಹರ್ಬಿರ್ ಸಿಂಗ್ ಸಂಧು, ಅಮಿತ್ ರೋಹಿದಾಸ್, ಸಂಪತ್ ಕುಮಾರ್ ಎಂ., ಗಗನ್‌ದೀಪ್ ಸಿಂಗ್, ದಯಾನಂದ ಸಿ., ನರೀಂದರ್ ಪಾಲ್ ಸಿಂಗ್, ಗುರ್ಮಲ್ ಸಿಂಗ್, ದಯಾನಂದ್.
ಮಿಡ್‌ಫೀಲ್ಡರ್ಸ್: ಸರ್ದಾರ್ ಸಿಂಗ್, ಮನ್‌ಪ್ರೀತ್ ಸಿಂಗ್, ಎಂ.ಬಿ. ಅಯ್ಯಪ್ಪ, ಕೊತಾಜಿತ್ ಸಿಂಗ್, ಪ್ರದೀಪ್ ಮೊರ್, ವಿವೇಕ್ ದಾರ್, ಬೀರೇಂದ್ರ ಲಾಕ್ರಾ, ಜಸ್‌ಪ್ರೀತ್ ಸಿಂಗ್, ಸಿಮ್ರಂಜಿತ್ ಸಿಂಗ್, ಮಂಜಿತ್ ಕುಲ್ಲು, ವಿಕಾಸ್ ಪಿಳ್ಳೈ, ಸುಮಿತ್.
ಫಾರ್ವರ್ಡ್ಸ್: ಎಸ್.ವಿ. ಸುನಿಲ್, ಗುರ್ವಿಂದರ್ ಸಿಂಗ್ ಚಾಂಡಿ, ಚಿಂಗ್ಲೆನ್‌ಸನಾ ಸಿಂಗ್, ದಾನೀಶ್ ಮುಜ್ತಬಾ, ಎಸ್.ಕೆ. ಉತ್ತಪ್ಪ, ಪ್ರಧಾನ್ ಸೋಮಣ್ಣ, ನಿತಿನ್ ತಿಮ್ಮಯ್ಯ, ಧರ್ಮವೀರ್ ಸಿಂಗ್, ಆಕಾಶ್‌ದೀಪ್ ಸಿಂಗ್, ಎಂ.ಜಿ. ಪೂಣಚ್ಚ, ಪ್ರಭದೀಪ್ ಸಿಂಗ್, ಪಿ.ಎಲ್. ತಿಮ್ಮಣ್ಣ, ಸುಖದೇವ್ ಸಿಂಗ್, ಗುರುಪ್ರೀತ್ ಸಿಂಗ್, ಜಸ್‌ಜೀತ್ ಸಿಂಗ್, ನಿಕಿನ್ ತಿಮ್ಮಯ್ಯ, ಹರ್ಮನ್ ಪ್ರೀತ್ ಸಿಂಗ್, ಎಂ.ಕೆ. ಮುದ್ದಪ್ಪ ಮತ್ತು ಗಗನ್‌ದೀಪ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.