ADVERTISEMENT

ಮಂಗಳೂರು, ಜಿಂಬಾಬ್ವೆ ಬಾಲಕರ ಕ್ರಿಕೆಟ್‌: ಹೀತ್‌ ಸ್ಟ್ರೀಕ್‌

ಡಿ. 11ರಿಂದ 15 ವರೆಗೆ ಮಂಗಳೂರು ಸೀರಿಸ್‌ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 4 ಮೇ 2018, 19:30 IST
Last Updated 4 ಮೇ 2018, 19:30 IST
ಜಿಂಬಾಬ್ವೆ ಮತ್ತು ಮಂಗಳೂರು ಬಾಲಕರ ತಂಡಗಳ ನಡುವೆ ಡಿಸೆಂಬರ್‌ನಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯದ ಕುರಿತು ಚರ್ಚಿಸಲು ಶುಕ್ರವಾರ ಮಂಗಳೂರಿಗೆ ಬಂದ ಜಿಂಬಾಬ್ವೆಯ ಹೀತ್ ಸ್ಟ್ರೀಕ್ ಅವರ ಹಸ್ತಾಕ್ಷರಕ್ಕಾಗಿ ಮಕ್ಕಳು ಮುಗಿ ಬಿದ್ದರು
ಜಿಂಬಾಬ್ವೆ ಮತ್ತು ಮಂಗಳೂರು ಬಾಲಕರ ತಂಡಗಳ ನಡುವೆ ಡಿಸೆಂಬರ್‌ನಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯದ ಕುರಿತು ಚರ್ಚಿಸಲು ಶುಕ್ರವಾರ ಮಂಗಳೂರಿಗೆ ಬಂದ ಜಿಂಬಾಬ್ವೆಯ ಹೀತ್ ಸ್ಟ್ರೀಕ್ ಅವರ ಹಸ್ತಾಕ್ಷರಕ್ಕಾಗಿ ಮಕ್ಕಳು ಮುಗಿ ಬಿದ್ದರು   

ಮಂಗಳೂರು: ಕರಾವಳಿ ಕ್ರಿಕೆಟ್‌ ಅಕಾಡೆಮಿ ಆಶ್ರಯದಲ್ಲಿ ಜಿಂಬಾಬ್ವೆ ಹಾಗೂ ಮಂಗಳೂರು ತಂಡಗಳ ನಡುವಣ ಡಿಸೆಂಬರ್ 11ರಿಂದ 15 ಹಾಗೂ 16 ವರ್ಷ ವಯೋಮಿತಿಯೊಳಗಿನ ಬಾಲಕರ ಮಂಗಳೂರು ಸೀರಿಸ್‌ ಕ್ರಿಕೆಟ್‌ ಟೂರ್ನಿ ನಡೆಯಲಿದೆ. ಇಲ್ಲಿನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜು ಕ್ರಿಕೆಟ್‌ ಕ್ರೀಡಾಂಗಣದಲ್ಲಿ  ಟೂರ್ನಿ ಆಯೋಜನೆಗೊಳ್ಳಲಿದೆ.

ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಜಿಂಬಾಬ್ವೆಯ 15 ಹಾಗೂ 16 ವರ್ಷ ವಯೋಮಿತಿಯೊಳಗಿನ ಕ್ರಿಕೆಟ್‌  ತಂಡದ ಕೋಚ್‌ ಹೀತ್‌ ಸ್ಟ್ರೀಕ್‌, ’ಕರಾವಳಿ ಭಾಗದಲ್ಲಿ ಉತ್ತಮ ಕ್ರಿಕೆಟ್‌ ಪ್ರತಿಭೆಗಳಿವೆ. ಅವರಿಗೆ ಚಿಕ್ಕ ವಯಸ್ಸಿನಿಂದ ಪ್ರೋತ್ಸಾಹ ನೀಡಿ ಬೆಳೆಸಬೇಕು ಎಂಬ ಉದ್ದೇಶದಿಂದ ಕರಾವಳಿ ಕ್ರಿಕೆಟ್‌ ಅಕಾಡೆಮಿ ಕ್ರಿಕೆಟ್‌ ತಂಡ ಹಾಗೂ ಜಿಂಬಾಬ್ವೆ ತಂಡಗಳ ನಡುವೆ ಟ್ವೆಂಟಿ–20 ಚುಟುಕು ಕ್ರಿಕೆಟ್‌ ಟೂರ್ನಿ ನಡೆಸಲಾಗುತ್ತಿದೆ. ಇಂತಹ ಪ್ರಯತ್ನ ದೇಶದಲ್ಲೇ ಮೊದಲು’ ಎಂದರು.

‘ಮಂಗಳೂರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಇದೆ. ಕ್ರೀಡಾ ಪ್ರತಿಭೆಗಳು ಇಲ್ಲಿವೆ. ಇಲ್ಲಿಗೆ ಎರಡನೇ ಬಾರಿಗೆ ಬರುತ್ತಿದ್ದೇನೆ. ಯುವ ಕ್ರಿಕೆಟ್ ಆಟಗಾರರ ಜತೆಗೆ ಕಾಲ ಕಳೆದ ಕ್ಷಣ ಖುಷಿ ತಂದಿದೆ’ ಎಂದರು.

ADVERTISEMENT

ಕರಾವಳಿ ಕ್ರಿಕೆಟ್‌ ಅಕಾಡೆಮಿ ಆಟಗಾರರು ತಂದಿದ್ದ ಬ್ಯಾಟ್‌ ಮೇಲೆ ತಮ್ಮ ಹಸ್ತಾಕ್ಷರ ಮಾಡಿದರು. ಈ ವೇಳೆ ಸೆಲ್ಫಿಗಾಗಿ ಜನರು ಮುಗಿಬಿದ್ದರು.

ಮಂಗಳೂರು ಹಾಗೂ ಜಿಂಬಾಬ್ವೆ ತಂಡಗಳ ನಡುವೆ ಕ್ರಿಕೆಟ್‌ 5 ದಿನಗಳ ಕಾಲ ಕ್ರಿಕೆಟ್‌ ಟೂರ್ನಿ ನಡೆಯಲಿದೆ. ಲೀಗ್‌ ಹಂತದ ಟೂರ್ನಿ ಇದಾಗಿದೆ. ಪ್ರತಿದಿನ 3 ಟೂರ್ನಿಗಳನ್ನು ನಡೆಸಲಾಗುತ್ತದೆ ಎಂದು ಕರಾವಳಿ ಕ್ರಿಕೆಟ್‌ ಅಕಾಡೆಮಿಯ ಸಂತೋಷ ಹೇಳಿದರು.

ಹೀತ್‌ ಸ್ಟ್ರೀಕ್‌ ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಸ್ಕೂಲ್‌ನ ಸಿಇಒ ಜೋಸೆಫ್‌ ರೇಗೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.