ADVERTISEMENT

ಮಂಡೇಲಾಗೆ ನಮನ...

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST
ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಟೆಸ್ಟ್‌ನ ಎರಡನೇ ದಿನದ ಆಟದ ವೇಳೆ ಇಂಗ್ಲೆಂಡ್‌ ಆಟಗಾರರು ನೆಲ್ಸನ್‌ ಮಂಡೇಲಾ ಅವರ ನಿಧನಕ್ಕೆ ಮೌನ ನಮನ ಸಲ್ಲಿಸಿದರು –ರಾಯಿಟರ್ಸ್ ಚಿತ್ರ
ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಟೆಸ್ಟ್‌ನ ಎರಡನೇ ದಿನದ ಆಟದ ವೇಳೆ ಇಂಗ್ಲೆಂಡ್‌ ಆಟಗಾರರು ನೆಲ್ಸನ್‌ ಮಂಡೇಲಾ ಅವರ ನಿಧನಕ್ಕೆ ಮೌನ ನಮನ ಸಲ್ಲಿಸಿದರು –ರಾಯಿಟರ್ಸ್ ಚಿತ್ರ   

ದುಬೈ (ಪಿಟಿಐ/ರಾಯಿಟರ್ಸ್): ನೆಲ್ಸನ್ ಮಂಡೇಲಾ ನಿಧನಕ್ಕೆ ಕ್ರೀಡಾ ಜಗತ್ತು ಸಂತಾಪ ವ್ಯಕ್ತಪಡಿಸಿದೆ.ಅಡಿಲೇಡ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ  ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್‌ನ ಶುಕ್ರವಾರದ ಆಟದ ಆರಂಭಕ್ಕೂ ಮುನ್ನ  ಉಭಯ ತಂಡಗಳ ಆಟಗಾರರು ಒಂದು ನಿಮಿಷ ಕಾಲ ಮೌನ ನಮನ ಸಲ್ಲಿಸಿದರು. ಜೊತೆಗೆ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು  ಆಡುವ ಮೂಲಕ ಮಂಡೇಲಾ ನಿಧನಕ್ಕೆ ಸಂತಾಪ ಸೂಚಿಸಿದರು.

ಇನ್ನೊಂದೆಡೆ ವಿಂಡೀಸ್ ಹಾಗೂ ನ್ಯೂಜಿಲೆಂಡ್ ಆಟಗಾರರೂ  ಪಂದ್ಯದ ಆರಂಭಕ್ಕೂ ಮುನ್ನ ಮೌನ ನಮನ ಸಲ್ಲಿಸಿದರು.
ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಮಂಡೇಲಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಓಸಿ) ಶುಕ್ರವಾರ ತನ್ನ ಧ್ವಜವನ್ನು ಅರ್ಧಕ್ಕೆ ಇಳಿಸಿ ಸಂತಾಪ ಸೂಚಿಸಿತು.

ಅವರು ಸ್ಫೂರ್ತಿದಾಯಕ ವ್ಯಕ್ತಿತ್ವದವರು. ನನ್ನ ಹೃದಯದಲ್ಲಿ ಅವರು ಶಾಶ್ವತವಾಗಿ ನೆಲೆಸಿರುತ್ತಾರೆ       – ಸಚಿನ್‌ ತೆಂಡೂಲ್ಕರ್

ಕ್ರೀಡೆಯ ಶಕ್ತಿಯಾಗಿ  ಗುರುತಿಸಿ ಕೊಂಡು ಎಲ್ಲರಿಗೂ ಸ್ಫೂರ್ತಿಯಾಗಿದ್ದರು  – ಐಸಿಸಿ ಅಧ್ಯಕ್ಷ ಅಲನ್ ಐಸಾಕ್

ಅವರ ಆತ್ಮ ಈಗ ವಿಶ್ರಾಂತಿ ಸ್ಥಳಕ್ಕೆ ಹಾರಿದೆ
–ಬಾಕ್ಸಿಂಗ್‌ ತಾರೆ ಮಹಮ್ಮದ್ ಅಲಿ

ಎಲ್ಲಾ ಕಾಲಕ್ಕೂ ಸಲ್ಲುವಂತ ಮಹಾನ್ ಮಾನವತಾವಾದಿ
– ಉಸೇನ್ ಬೋಲ್ಟ್

ನಾವೆಲ್ಲರೂ ಅವರ ಹಾದಿಯಲ್ಲಿ ಮುನ್ನಡೆಯಬೇಕು  – ಪೀಲೆ

ನೀವು ಎಂದೆಂದಿಗೂ ನಮ್ಮ ಜೊತೆಯಲ್ಲಿರುವಿರಿ – ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ

ಮರೆಯಲಾಗದ ಸ್ಫೂರ್ತಿಯ ಚಿಲುಮೆ  –ಬ್ರಯಾನ್ ಲಾರಾ

ಮಾನವತೆಗಾಗಿ ಮಂಡೇಲಾ ಕೊಡುಗೆ ಅನನ್ಯ  – ಟೈಗರ್‌ ವುಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.