ADVERTISEMENT

ಮತ್ತೊಂದು ವಿವಾದದಲ್ಲಿ ಐಪಿಎಲ್!

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 11:15 IST
Last Updated 18 ಜುಲೈ 2013, 11:15 IST
ಮತ್ತೊಂದು ವಿವಾದದಲ್ಲಿ ಐಪಿಎಲ್!
ಮತ್ತೊಂದು ವಿವಾದದಲ್ಲಿ ಐಪಿಎಲ್!   

ನವದೆಹಲಿ (ಪಿಟಿಐ): ಐಪಿಎಲ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದ ಸ್ಪಾಟ್-ಫಿಕ್ಸಿಂಗ್ ಹಗರಣದ ನಂತರ ಇದೀಗ ನಿಷೇದಿತ ಮದ್ದು  ಸೇವನೆ ವಿವಾದ ಐಪಿಎಲ್‌ಗೆ ಅಪ್ಪಳಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ ಆಟಗಾರ ಪ್ರದೀಪ್ ಸ್ಯಾಂಗ್‌ವಾನ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಐಪಿಎಲ್‌ನಲ್ಲಿ ನಿಷೇಧಿತ ಮದ್ದು ಸೇವನೆಯ 2ನೇ ಪ್ರಕರಣ ಇದಾಗಿದ್ದು, ಈ ಹಿಂದೆ ಪಾಕಿಸ್ತಾನದ ಮಹಮ್ಮದ್ ಆಸಿಫ್ ಅವರು ಸಿಕ್ಕಿಬಿದ್ದಿದ್ದರು.

ಪ್ರದೀಪ್ ಅವರು ನಿಷೇಧಿತ ಔಷಧಿ ಸೇವಿಸಿರುವುದು ದೃಢಪಟ್ಟಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಪ್ರದೀಪ್ ಸೇವಿಸಿರುವುದು ನಿಷೇಧಿತ ಔಷಧಿಯೋ ಅಥವಾ ಉದ್ದೀಪನ ಮದ್ದೋ ಎಂಬುದು ಇನ್ನೂ ಖಚಿತಗೊಂಡಿಲ್ಲ.

ಈಗಾಗಲೇ `ಎ' ಮಾದರಿ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಇನ್ನು ಬಿ ಮಾದರಿ ಪರೀಕ್ಷೆಯಷ್ಟೆ ಬಾಕಿ ಉಳಿದಿದ್ದು ಅದರಲ್ಲಿ ಅದು ಯಾವ ಬಗೆಯ ಮದ್ದು ಎಂಬುದು ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರದೀಪ್ ಅವರು 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆನಂತರ ಅವರು ರಣಜಿ ಹಾಗೂ ಐಪಿಎಲ್‌ನ ಮೊದಲೆರಡು ಋತುವಿನ ಪಂದ್ಯಗಳಲ್ಲಿ ದೆಹಲಿ ಪರ ಆಡಿದ್ದರು. ಇತ್ತೀಚಿನ ಐಪಿಎಲ್‌ನ 2ನೆ ಆವೃತ್ತಿಗಳಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.