ADVERTISEMENT

ಮಮತಾಗೆ ರೂ 1 ಕೋಟಿ ಬಹುಮಾನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಹಿರಿಯೂರು (ಚಿತ್ರದುರ್ಗ ಜಿಲ್ಲೆ): ಇತ್ತೀಚೆಗೆ ವಿಶ್ವಕಪ್ ಕಬಡ್ಡಿ ಗೆದ್ದ ಭಾರತ ತಂಡದ ನಾಯಕಿ ಉಡುಪಿಯ ಮಮತಾ ಪೂಜಾರ್ ಅವರಿಗೆ ಸರ್ಕಾರ ರೂ. 1 ಕೋಟಿ ಬಹುಮಾನ ಘೋಷಣೆ ಮಾಡಬೇಕು ಎಂದು ರಾಜ್ಯ ಕಬಡ್ಡಿ ಸಂಸ್ಥೆ ಅಧ್ಯಕ್ಷ ಎಂ. ಹನುಮಂತೇಗೌಡ ಒತ್ತಾಯ ಮಾಡಿದರು.

ನಗರದ ನೆಹರು ಮೈದಾನದಲ್ಲಿ ಭಾನುವಾರ ನ್ಯೂಡೈಮಂಡ್    ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿಶ್ವಕಪ್ ಕಬಡ್ಡಿ ತಂಡದಲ್ಲಿದ್ದ ನೆರೆಯ ರಾಜ್ಯದ ಆಟಗಾರ್ತಿಯರಿಗೆ ಅಲ್ಲಿನ ಸರ್ಕಾರ ತಲಾ ರೂ. 1 ಕೋಟಿ ಬಹುಮಾನ ನೀಡಿವೆ. ನಮ್ಮ ಸರ್ಕಾರ ಕೇವಲ ರೂ. 5 ಲಕ್ಷ ನೀಡಿದ್ದು, ನಮ್ಮ ರಾಜ್ಯದ ಕ್ರೀಡಾಪಟುವಿಗೆ ಅನ್ಯಾಯ ಮಾಡಿದಂತೆ ಆಗಿದೆ. ನಮ್ಮ ಸರ್ಕಾರವೂ ರೂ. 1 ಕೋಟಿ ಬಹುಮಾನ ನೀಡುವ ಮೂಲಕ ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿಗೆ ಪ್ರೋತ್ಸಾಹ ನೀಡಬೇಕು ಎಂದರು. ಮಮತಾ ಪೂಜಾರಿ ಅವರಿಗೆ ರಾಜ್ಯ ಕಬಡ್ಡಿ ಸಂಸ್ಥೆ ವತಿಯಿಂದ ರೂ. 50 ಸಾವಿರ ಬಹುಮಾನ ನೀಡಲಾಗುವುದು ಎಂದು ಅವರು ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.