ADVERTISEMENT

ಮರ್ರೆಗೆ ಬಿಬಿಸಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST
ಮಿಯಾಮಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಅವರಿಗೆ ಬಿಬಿಸಿ ವರ್ಷದ ಕ್ರೀಡಾಪಟು ಪ್ರಶಸ್ತಿ ನೀಡಲಾಯಿತು. 	–ಎಪಿ ಚಿತ್ರ
ಮಿಯಾಮಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಅವರಿಗೆ ಬಿಬಿಸಿ ವರ್ಷದ ಕ್ರೀಡಾಪಟು ಪ್ರಶಸ್ತಿ ನೀಡಲಾಯಿತು. –ಎಪಿ ಚಿತ್ರ   

ಲಂಡನ್‌ (ಪಿಟಿಐ): 77 ವರ್ಷಗಳ ಬಳಿಕ ವಿಂಬಲ್ಡನ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಇಂಗ್ಲೆಂಡ್‌ನ ಮೊದಲ ಆಟಗಾರ ಆ್ಯಂಡಿ ಮರ್ರೆ ಅವರು ‘ಬಿಬಿಸಿ ವರ್ಷದ ಕ್ರೀಡಾಪಟು’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಿಯಾಮಿಯಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 26 ವರ್ಷ ವಯಸ್ಸಿನ ಮರ್ರೆ ಸದ್ಯ ಮಿಯಾಮಿಯಲ್ಲಿ ವಾಸ್ತವ್ಯ ಹೂಡಿದ್ದು ತರಬೇತಿಯಲ್ಲಿ ನಿರತರಾಗಿದ್ದಾರೆ. ಫಾರ್ಮುಲಾ ಒನ್‌ ಚಾಂಪಿಯನ್‌ ಜರ್ಮನಿಯ ಸೆಬಾಸ್ಟಿಯನ್‌ ವೆಟೆಲ್‌ ‘ ವಿದೇಶದ ಅತ್ಯುತ್ತಮ ಕ್ರೀಡಾಪಟು’ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.