ADVERTISEMENT

ಮಲ್ಲಕಂಬಕ್ಕೆ ಮಹಾ ಅಧಿಪತಿ!

​ಪ್ರಜಾವಾಣಿ ವಾರ್ತೆ
Published 28 ಜನವರಿ 2011, 18:30 IST
Last Updated 28 ಜನವರಿ 2011, 18:30 IST
ಮಲ್ಲಕಂಬಕ್ಕೆ ಮಹಾ ಅಧಿಪತಿ!
ಮಲ್ಲಕಂಬಕ್ಕೆ ಮಹಾ ಅಧಿಪತಿ!   

ಹಾನಗಲ್ಲ:  ಹಾಲಿ ಚಾಂಪಿಯನ್ ಮಹಾರಾಷ್ಟ್ರ ತಂಡಗಳು ಶನಿವಾರ ಹಾನಗಲ್ಲನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಯ ತಂಡ ವಿಭಾಗದಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡರೆ, ಆತಿಥೇಯ ಕರ್ನಾಟಕ ಮಾತ್ರ ನಿರಾಸೆ ಅನುಭವಿಸಬೇಕಾಯಿತು.

ಹಾನಗಲ್ಲನ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ಮಲ್ಲಕಂಬ ಸಂಸ್ಥೆ, ಹಾವೇರಿ ಜಿಲ್ಲಾಡಳಿತ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಮಲ್ಲಕಂಬಪಟುಗಳು ಪಾರಮ್ಯ ಮೆರೆದರು. ಜೂನಿಯರ್ ಮತ್ತು ಸೀನಿಯರ್ ಬಾಲಕ, ಬಾಲಕಿಯರ ವಿಭಾಗಗಳ ನಾಲ್ಕು ತಂಡ ಪ್ರಶಸ್ತಿಗಳನ್ನು ಮಹಾರಾಷ್ಟ್ರ ತನ್ನದಾಗಿಸಿಕೊಂಡಿತು.  ಸೀನಿಯರ್ ವಿಭಾಗದ 18 ವರ್ಷ ಮೇಲ್ಪಟ್ಟವರು, ಜೂನಿಯರ್ ವಿಭಾಗದ 16 ವರ್ಷ ಮೇಲ್ಪಟ್ಟ ಮತ್ತು ಒಳಗಿನ ವಿಭಾಗಗಳ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.

ಕರ್ನಾಟಕಕ್ಕೆ 4ನೇ ಸ್ಥಾನ: ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗೋವಾ ರಾಜ್ಯದ ಮಲ್ಲಕಂಬ ಪಟುಗಳ ಮುಂದೆ ಆತಿಥೇಯ ಕರ್ನಾಟಕದ ಮಲ್ಲರು ನಿರಾಸೆ ಅನುಭವಿಸಬೇಕಾಯಿತು.

ADVERTISEMENT

18 ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ನಾಲ್ಕನೇ ಸ್ಥಾನ (42.65 ಪಾಯಿಂಟ್) ಪಡೆದದ್ದೇ ಸಾಧನೆ. 16 ವರ್ಷದೊಳಗಿನ ಬಾಲಕಿಯರ ರೋಪ್ ಮಲ್ಲಕಂಬದಲ್ಲಿ ಕರ್ನಾಟಕ ತಂಡವು 17.50 ಅಂಕ ಗಳಿಸಿ, ಐದನೇ ಸ್ಥಾನ ಪಡೆದರೆ, 16 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಆತಿಥೇಯ ಬಾಲಕಿಯರು 17.25 ಅಂಕ ಗಳಿಸಿ 4ನೇ ಸ್ಥಾನದಲ್ಲಿ ಉಳಿದರು. ಕಳೆದ ವರ್ಷವೂ ಕರ್ನಾಟಕ ತಂಡಗಳು ಐದನೇ ಸ್ಥಾನ ಗಳಿಸಿದ್ದವು.

ಫಲಿತಾಂಶಗಳು: ತಂಡ ವಿಭಾಗ: ಬಾಲಕರು:
18 ವರ್ಷ ಮೇಲ್ಪಟ್ಟು: ಮಹಾರಾಷ್ಟ್ರ (ಅಭಿಷೇಕ ದೇವಲ್, ಆದಿತ್ಯ ಆಹಿರೆ, ಅನೂಪ್ ಠಾಕೂರ್, ರಾಜೇಶ ಅಮರ್ಲೆ;  ಪಾಯಿಂಟ್ಸ್: 120.30) -1, ಮಧ್ಯಪ್ರದೇಶ (ಅಜಯ ವಕ್ತಾರಿಯಾ, ಪಂಕಜ್ ಸೋನಿ, ಗಣೇಶ ಸಂಗೀತಾ, ಮುನ್ನಾಲಾಲ್, ಪಾಯಿಂಟ್ಸ್: 105,70), ತಮಿಳುನಾಡು (ಜಿ. ಮಣಿಭಾರತಿ, ಕಾಂಬೆಟಕರ್, ನಟರಾಜನ್, ಸೆಲ್ವಂಚೆಜಿರಾಮ ಪಾಯಿಂಟ್: 90.05)-3;

ಬಾಲಕಿಯರು: 16 ವರ್ಷ ಮೇಲ್ಪಟ್ಟು:ಮಹಾರಾಷ್ಟ್ರ (ಋತಾ ದೇಶಮುಖ, ಆರತಿ ಸಾಖರೆ, ಸಲೀಲಿ ಧೂರಿ, ಶ್ರೇಯಸಿ ಮನೋಹರ, ಪಾ: 47.90)-1, ಮಧ್ಯಪ್ರದೇಶ (ಯಶೋಧಾ ಮದಾರಿಯಾ, ಸ್ನೇಹಾ ಶರ್ಮಾ, ಯಶೋಧಾ ಹರಿಯಾ, ಓಸಿಮ್ ಚೌಬೆ, ಪಾ:38.20); ಗೋವಾ (ಗೀತಾ ಝಲ್ಮಿ, ರವೀನಾ ಸತರ್ಕರ್, ದಿಶಾ ಗಾವಡೆ, ಪೂಜಾ ಗಾವಡೆ, ಪಾ: 28.45)-3;

16 ವರ್ಷದೊಳಗಿನವರು: ಮಹಾರಾಷ್ಟ್ರ (ವರ್ಷಾ ಮೋರೆ, ಪೂಜಾ ಚವ್ಹಾಣ, ಸುಷ್ಮಿತಾ ಹಳತೆ, ಸ್ವರದಾ ಫಡ್ಕೆ; ಪಾ: 23.60)-1, ಮಧ್ಯಪ್ರದೇಶ (ಶ್ವೇತಾ ಚವ್ಹಾಣ, ಜೂಲಿ ಜೋಶಿ, ಪೂಜಾ ಗುಲ್ಯ, ಬುಲ್‌ಬುಲ್ ಕಾಮೇರಿಯಾ, ಪಾ: 21.25)-2, ಗೋವಾ (ರಚಿತಾ ಪ್ರಿಯೋಲ್ಕರ್, ಹಿಂದವಿ ಗಾವಡೆ, ನಿಕಿತಾ ಗಾವಡೆ, ದಿಕ್ಷಾ ಪುರೋಹಿತ್, ಪಾ: 18.65)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.