ADVERTISEMENT

ಮಹಮ್ಮದ್‌ ಶಮಿ ವಿರುದ್ಧ ತನಿಖೆಗೆ ಸಿಒಎ ಸೂಚನೆ

ಪಿಟಿಐ
Published 14 ಮಾರ್ಚ್ 2018, 20:35 IST
Last Updated 14 ಮಾರ್ಚ್ 2018, 20:35 IST
ಮಹಮ್ಮದ್‌ ಶಮಿ ವಿರುದ್ಧ ತನಿಖೆಗೆ ಸಿಒಎ ಸೂಚನೆ
ಮಹಮ್ಮದ್‌ ಶಮಿ ವಿರುದ್ಧ ತನಿಖೆಗೆ ಸಿಒಎ ಸೂಚನೆ   

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಧ್ಯಮವೇಗಿ ಮಹಮ್ಮದ್ ಶಮಿ ವಿರುದ್ಧ ಪತ್ನಿ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (ಎಸಿಯು) ಸೂಚಿಸಲಾಗಿದೆ.

ಎಸಿಯು ಮುಖ್ಯಸ್ಥ ನೀರಜ್‌ ಕುಮಾರ್‌ ಅವರಿಗೆ ಈ ಕುರಿತು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಅಧ್ಯಕ್ಷ ವಿನೋದ್ ರಾಯ್‌ ಆದೇಶ ನೀಡಿದ್ದಾರೆ.

ಶಮಿ ಪತ್ನಿ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಲ್ಲಿ ಭ್ರಷ್ಟಾಚಾರದ ಕುರಿತು ಕೂಡ ಉಲ್ಲೇಖಿಸಿದ್ದಾರೆ. ಆರೋಪ ಕೇಳಿ ಬಂದ ಕಾರಣ ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪದ್ಧತಿಯಿಂದ ಶಮಿ ಅವರನ್ನು ಕೈಬಿಟ್ಟಿತ್ತು.

ADVERTISEMENT

ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ತನಿಖೆಗೆ ಆದೇಶಿಸಿರುವ ರಾಯ್‌ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ನೀರಜ್‌ ಕುಮಾರ್‌ ಅವರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.